alex Certify
ಕನ್ನಡ ದುನಿಯಾ       Mobile App
       

Kannada Duniya

ಮದರ್ ಡ್ರೆಸ್ ಅಂದ್ರೆ ಯಾವ್ದು? ಟ್ರೋಲರ್ ಗಳಿಗೆ ತಕ್ಕ ಉತ್ತರ ನೀಡಿದ ನಟಿ

ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ‘ವೀರೇ ದಿ ವೆಡ್ಡಿಂಗ್’ ನಲ್ಲಿ ಹಾಟ್ ಎಂಡ್ ಬೋಲ್ಡ್ ಅವತಾರದಲ್ಲಿ ಮಿಂಚಿದ್ದಾಳೆ. ಚಿತ್ರದ ಟ್ರೈಲರ್ ಹಾಗೂ ಚಿತ್ರದ ಪ್ರಮೋಷನ್ ವೇಳೆ ಗ್ಲಾಮರಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾಳೆ. ಬೇಬೋ ಶಾರ್ಟ್ ಡ್ರೆಸ್ ಈಗ ಚರ್ಚೆಗೆ ಕಾರಣವಾಗಿದೆ. ಗ್ಲಾಮರಸ್ ಡ್ರೆಸ್ ಸಾಮಾಜಿಕ ಜಾಲತಾಣದ ಟ್ರೋಲರ್ ಗಳಿಗೆ ಆಹಾರವಾಗಿದೆ.

ಒಂದು ಮಗುವಿನ ತಾಯಿ ನೀವು. ಡ್ರೆಸ್ ಬಗ್ಗೆ ಗಮನವಿರಲಿ ಅಂತಾ ಟ್ರೋಲ್ ಮಾಡಲಾಗಿದೆ. ಇದಕ್ಕೆ ಕರೀನಾ ಕಪೂರ್ ಖಾನ್ ತಕ್ಕ ಉತ್ತರ ನೀಡಿದ್ದಾಳೆ. ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ಕರೀನಾ ತಾಯಿಯಾದವಳಿಗೆ ಅಂತಾನೇ ಸ್ಪೇಷಲ್ ಡ್ರೆಸ್ ಇದ್ಯಾ ಎಂದು ಪ್ರಶ್ನೆ ಮಾಡಿದ್ದಾಳೆ.

ತನಗೆ ಇಷ್ಟವಾಗುವ ಬಟ್ಟೆ ತೊಡುವ ಅಧಿಕಾರ ಪ್ರತಿಯೊಬ್ಬರಿಗೂ ಇದೆ. ನನ್ನ ತಾಯಿ ಈಗ್ಲೂ ಜೀನ್ಸ್ ಹಾಗೂ ಟೀ ಶರ್ಟ್ ಹಾಕ್ತಾರೆ. ಅತ್ತೆ ಕೂಡ ಜೀನ್ಸ್ ನಲ್ಲಿ ಸುಂದರವಾಗಿ ಕಾಣ್ತಾರೆ. ಸೀರೆಯನ್ನು ಕೂಡ ಅವ್ರು ಸಂಭಾಳಿಸ್ತಾರೆ. ನಾನು ಒಂದು ಮಗುವಿನ ತಾಯಿ. ಹಾಗಾಗಿ ನಾನು ಚಿಕ್ಕ ಬಟ್ಟೆ ಧರಿಸಬಾರದು ಎಂಬ ನಿಯಮವೇನಿಲ್ಲ. ನನಗೆ ಸರಿ ಹೊಂದುವ ಬಟ್ಟೆಯನ್ನು ನಾನು ಧರಿಸ್ತೇನೆ ಎಂದು ಕರೀನಾ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...