alex Certify
ಕನ್ನಡ ದುನಿಯಾ       Mobile App
       

Kannada Duniya

ಮಗನ ಹೆಸರಿನ ಕುರಿತಾದ ರಹಸ್ಯ ಬಿಚ್ಚಿಟ್ಟ ಕರೀನಾ

ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ದಂಪತಿ ತಮ್ಮ ಮಗನಿಗೆ ತೈಮುರ್ ಅಲಿ ಖಾನ್ ಅಂತಾ ಹೆಸರಿಟ್ಟಿರೋದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ನಂತರ ಖುದ್ದು ಸೈಫ್ ಮಗನ ಹೆಸರನ್ನು ಫೈಜ್ ಎಂದು ಬದಲಾಯಿಸಲು ಮುಂದಾಗಿದ್ದರಂತೆ.

ಆದ್ರೆ ಹೆಸರು ಬದಲಾವಣೆ ಮಾಡಲು ಕರೀನಾ ಒಪ್ಪಿರಲಿಲ್ಲ. ತೈಮುರ್ ಅಂದ್ರೆ ಕಬ್ಬಿಣ ಎಂದರ್ಥ. ತಮ್ಮ ಮಗ ಕೂಡ ಬೆಳೆದು ದೊಡ್ಡವನಾದ್ಮೇಲೆ ಐರನ್ ಮ್ಯಾನ್ ಆಗ್ತಾನೆ. ಹಾಗಾಗಿ ಜನರ ಒತ್ತಡ ಮತ್ತು ವಿವಾದಗಳಿಗೆ ಮಣಿದು ಹೆಸರು ಬದಲಾಯಿಸೋದು ಬೇಡ ಎಂದಿದ್ದರಂತೆ ಕರೀನಾ.

ಟಿವಿ ಸಂದರ್ಶನವೊಂದರಲ್ಲಿ ಈ ವಿಷಯ ತಿಳಿಸಿದ್ದಾಳೆ ನಟೀಮಣಿ. ಆರಂಭದಲ್ಲಿ ತೈಮುರ್ ಹೆಸರಿನ ಬಗ್ಗೆ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು ನಿಜ. ಆದ್ರೆ ದಿನಕಳೆದಂತೆ ಆ ವಿವಾದ ತಣ್ಣಗಾಗಿದೆ. ತೈಮುರ್ ಅಲಿ ಖಾನ್ ಅಂತೂ ಈಗ ಮನೆಮಾತಾಗಿದ್ದಾನೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...