alex Certify
ಕನ್ನಡ ದುನಿಯಾ       Mobile App
       

Kannada Duniya

ಐಶ್-ಸಲ್ಮಾನ್ ಮಧ್ಯೆ ಪ್ರೀತಿ ಚಿಗುರಲು ಕಾರಣವಾಗಿದ್ಲು ಕರೀನಾ

ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ 38ನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಕರೀನಾ 2000ರಲ್ಲಿ ರೆಫ್ಯೂಜಿ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಯಾಗಿದ್ದು, ಅಲ್ಲಿಂದ ಇಲ್ಲಿಯವರೆಗೂ ಹಿಟ್ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾಳೆ. ಹಾಗೆ ಅನೇಕ ಚಿತ್ರಗಳನ್ನು ರಿಜೆಕ್ಟ್ ಕೂಡ ಮಾಡಿದ್ದಾಳೆ.

ಕರೀನಾ ಕೈ ತಪ್ಪಿ ಹೋದ ಚಿತ್ರಗಳಲ್ಲಿ ಹಮ್ ದಿಲ್ ದೇ ಚುಕೆ ಸನಮ್ ಕೂಡ ಒಂದು. 1999ರಲ್ಲಿ ತೆರೆಗೆ ಬಂದ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಐಶ್ ಕಾಣಿಸಿಕೊಂಡಿದ್ದಳು. ಸಂಜಯ್ ಲೀಲಾ ಬನ್ಸಾಲಿ ಮೊದಲ ಆಯ್ಕೆ ಕರೀನಾ ಆಗಿದ್ಲಂತೆ. ಕರೀನಾ ತಾಯಿಗೆ ಆಫರ್ ಕೂಡ ನೀಡಿದ್ದರಂತೆ. ಆದ್ರೆ ಕರೀನಾ ವಿದ್ಯಾಭ್ಯಾಸದ ಕಾರಣ ಹೇಳಿ ಸಿನಿಮಾ ಕೈ ಬಿಟ್ಟಿದ್ದರಂತೆ.

ಹಮ್ ದಿಲ್ ದೇ ಚುಕೆ ಸನಮ್ ಚಿತ್ರದಲ್ಲಿಯೇ ಐಶ್ ಹಾಗೂ ಸಲ್ಮಾನ್ ಮಧ್ಯೆ ಪ್ರೀತಿ ಚಿಗುರಿದ್ದು. ಒಂದು ವೇಳೆ ಕರೀನಾ, ಐಶ್ ಬದಲು ಕಾಣಿಸಿಕೊಂಡಿದ್ದರೆ ಐಶ್-ಸಲ್ಮಾನ್ ಮಧ್ಯೆ ಪ್ರೀತಿ ಚಿಗುರ್ತಿತ್ತೋ ಇಲ್ವೋ ಗೊತ್ತಿಲ್ಲ. ಇಬ್ಬರ ಮಧ್ಯೆ ಪ್ರೀತಿ ಚಿಗುರಲು ಒಂದರ್ಥದಲ್ಲಿ ಕರೀನಾ ಕೂಡ ಕಾರಣ ಎನ್ನುತ್ತೆ ವರದಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...