alex Certify
ಕನ್ನಡ ದುನಿಯಾ       Mobile App
       
Kannada Duniya

ಅಮ್ಮನಾದ್ಮೇಲೆ ಗರ್ಲ್ಸ್ ಗ್ಯಾಂಗ್ ಜೊತೆ ಕರೀನಾ ಪಾರ್ಟಿ

601

ಹೆರಿಗೆಯಾಗಿ ಮೂರು ತಿಂಗಳು ಹೊರಗೆ ಹೋಗಬಾರದು, ಕತ್ತಲ ಕೋಣೆಯಲ್ಲಿ ಕಾಲ ಕಳೆಯಬೇಕೆನ್ನುವ ಕಾಲ ಈಗಿಲ್ಲ. ಆದ್ರೆ ಹೆರಿಗೆ ನಂತ್ರ ಎಲ್ಲ ತಾಯಂದಿರು ವಿಶ್ರಾಂತಿ ಬಯಸ್ತಾರೆ. ಸೆಲೆಬ್ರಿಟಿ ಅಮ್ಮಂದಿರು ಕೂಡ ಸ್ವಲ್ಪ ಸಮಯ ಕ್ಯಾಮರಾ, ಮೇಕಪ್ ನಿಂದ ದೂರವಿರ್ತಾರೆ. ಆದ್ರೆ ಬಾಲಿವುಡ್ ಬೇಬೋ ಇದಕ್ಕೆ ತದ್ವಿರುದ್ಧ.

ಹೆರಿಗೆಗಿಂತ ಮೊದಲು ಡೆಲೆವರಿ ದಿನಾಂಕದವರೆಗೂ ಕೆಲಸ ಮಾಡಿದ್ದ ಕರೀನಾ ಕಪೂರ್ ಖಾನ್, ಅನೇಕ ಪಾರ್ಟಿಗಳಲ್ಲಿ ಮಿಂಚಿದ್ದಳು. ಹೆರಿಗೆ ನಂತ್ರ ಕೂಡ ಕರೀನಾ ವಿಶ್ರಾಂತಿ ತೆಗೆದುಕೊಳ್ತಾ ಇಲ್ಲ. ಡಿಸೆಂಬರ್ 20 ರಂದು ಮುದ್ದಾದ ಮಗುವಿಗೆ ಜನ್ಮ ನೀಡಿರುವ ಕರೀನಾ, ಕ್ರಿಸ್ಮಸ್ ಪಾರ್ಟಿ ಹಾಗೂ ನ್ಯೂ ಇಯರ್ ಪಾರ್ಟಿಗಳಲ್ಲಿ ಸೈಫ್ ಅಲಿ ಖಾನ್ ಜೊತೆ ಕಾಣಿಸಿಕೊಂಡಿದ್ದಳು.

ಈಗ ಮತ್ತೆ ಗರ್ಲ್ಸ್ ಗ್ಯಾಂಗ್ ಜೊತೆ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾಳೆ. ಸಹೋದರಿ ಕರೀಶ್ಮಾ , ಸ್ನೇಹಿತೆ ಮಲೈಕಾ ಅರೋರಾ ಖಾನ್ ಜೊತೆ ಮುಂಬೈ ರೆಸ್ಟೋರೆಂಟ್ ಒಂದರಲ್ಲಿ ಕರೀನಾ ಪಾರ್ಟಿ ಮಾಡಿದ್ದಾಳೆ. ಕೆಂಪು ಡ್ರೆಸ್ ನಲ್ಲಿ ಸುಂದರವಾಗಿ ಕಾಣ್ತಿದ್ದ ಕರೀನಾ ಕ್ಯಾಮರಾಕ್ಕೆ ಫೋಸ್ ನೀಡಿದ್ದಾಳೆ.

ಕರೀನಾ ಪತಿ ಜೊತೆ ಪಾರ್ಟಿಗೆ ಹೋದ್ರೆ ಮಗ ತೈಮೂರ್ ನನ್ನು ಸೈಫ್ ಮಗಳು ಸಾರಾ ಹಾಗೂ ಮಗ ಇಬ್ರಾಹಿಂ ನೋಡಿಕೊಳ್ತಾರೆಂದು ಈ ಹಿಂದೆ ಮಾಧ್ಯಮಗಳು ವರದಿ ಮಾಡಿದ್ದವು.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...
ಅಮ್ಮನಾದ್ಮೇಲೆ ಗರ್ಲ್ಸ್ ಗ್ಯಾಂಗ್ ಜೊತೆ ಕರೀನಾ ಪಾರ್ಟಿ | Kannada Dunia | Kannada News | Karnataka News | India News