alex Certify
ಕನ್ನಡ ದುನಿಯಾ       Mobile App
       

Kannada Duniya

ಸೈಫ್ ಮಗಳು ಸಾರಾ ಲುಕ್ ಇಷ್ಟಪಡದ ಕರೀನಾ ಏನು ಮಾಡಿದ್ಲು ಗೊತ್ತಾ?

ಸಾರಾ ಅಲಿ ಖಾನ್ ಶೀಘ್ರವೇ ಕೇದಾರನಾಥ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಯಾಗ್ತಿದ್ದಾಳೆ. ಈ ಚಿತ್ರದಲ್ಲಿ ಸಾರಾ ಸುಂದರವಾಗಿ ಕಾಣಬೇಕೆಂಬ ಕಾರಣಕ್ಕೆ ನಟಿ ಕರೀನಾ ಕಪೂರ್ ಖಾನ್ ಸಾರಾಗೆ ಸಹಾಯ ಮಾಡಿದ್ದಾರೆ.

ಕೇದಾರನಾಥ್ ಚಿತ್ರದಲ್ಲಿ ಸಾರಾ ಲುಕ್ ಕರೀನಾಗೆ ಇಷ್ಟವಾಗಲಿಲ್ಲವಂತೆ. ತಕ್ಷಣ ಕರೀನಾ ತನ್ನ ಸ್ಟೈಲಿಸ್ಟ್ ಹಾಗೂ ಮೇಕಪ್ ಮೆನ್ ರನ್ನು ಸಾರಾ ಬಳಿ ಕಳುಹಿಸಿದ್ದಾರಂತೆ. ಮೊದಲ ಬಾರಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ಮಗಳಿಗೆ ಚಿಕ್ಕಮ್ಮ ಕರೀನಾ  ಸಲಹೆ, ಸಹಾಯ ಮಾಡ್ತಿದ್ದಾರೆ. ಸದ್ಯ ಕರೀನಾ ಮೇಕಪ್ ಮೆನ್ ಸಾರಾಗೆ ಬಣ್ಣ ಬಳಿದಿದ್ದಾರೆ. ಕೇದಾರನಾಥ್ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆದಿದೆಯಂತೆ.

ಕ್ಲೈಮ್ಯಾಕ್ಸ್ ನಲ್ಲಿ ಸಾರಾ ಸುಂದರವಾಗಿ ಕಾಣ್ತಾಳಂತೆ. ಸಾರಾ ಸ್ಪೆಷಲ್ ಆಗಿ ಕಾಣಲು ಕರೀನಾ ಹಾಗೂ ಮೇಕಪ್ ಮೆನ್ ಕಾರಣ. ಕರೀನಾ ಕ್ಲೈಮ್ಯಾಕ್ಸ್ ದೃಶ್ಯದ ಮೇಕಪ್ ಗೆ ಹೆಚ್ಚು ಗಮನ ನೀಡಿದ್ದಾರಂತೆ.

ನಿರ್ಮಾಪಕರ ಗಲಾಟೆಯಿಂದ ಚಿತ್ರ ಬಿಡುಗಡೆ ದಿನಾಂಕದ ಬಗ್ಗೆ ಗೊಂದಲ ಏರ್ಪಟ್ಟಿತ್ತು. ಸೈಫ್ ಅಲಿ ಖಾನ್ ಮಧ್ಯ ಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಿದ್ದಾರೆ ಎನ್ನಲಾಗಿದೆ. ಸಾರಾ ಜೊತೆ ಸುಶಾಂತ್ ಸಿಂಗ್ ರಜಪೂತ್ ಕೇದಾರನಾಥ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...