alex Certify
ಕನ್ನಡ ದುನಿಯಾ       Mobile App
       

Kannada Duniya

ಸೋನಂ ಕಪೂರ್ ಬೆಸ್ಟ್ ಫ್ರೆಂಡ್ಸ್ ಯಾರಂತೆ ಗೊತ್ತಾ…?

ಬಾಲಿವುಡ್ ನಟಿ ಸೋನಂ ಕಪೂರ್ ಕೆಲ ದಿನಗಳ ಹಿಂದಷ್ಟೇ ಮುಂಬೈನಲ್ಲಿ ದೆಹಲಿ ಮೂಲದ ಉದ್ಯಮಿ ಆನಂದ್ ಅಹುಜಾರೊಂದಿಗೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಈ ಸಮಾರಂಭಕ್ಕೆ ಬಹುತೇಕ ಬಾಲಿವುಡ್ ಸೆಲೆಬ್ರಿಟಿಗಳ ಆಗಮಿಸಿ ನವ ದಂಪತಿಗಳಿಗೆ ಶುಭ ಕೋರಿದ್ದಾರೆ.

ವಿವಾಹ ಸಮಾರಂಭದ ಬಳಿಕ ಸೋನಂ ಕಪೂರ್, ಕೇನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪಾಲ್ಗೊಳ್ಳುವ ಸಲುವಾಗಿ ಫ್ರಾನ್ಸ್ ಗೆ ತೆರಳಿದ್ದಾರೆ. ಎಲ್’ ಓರಿಯಲ್ ಪ್ಯಾರಿಸ್ ನ ಬ್ರಾಂಡ್ ಅಂಬಾಸಿಡರ್ ಆಗಿರುವ ಸೋನಂ ಕಪೂರ್, ಸೋಮವಾರ ಮತ್ತು ಮಂಗಳವಾರದಂದು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಲಿದ್ದಾರೆ.

ಈ ಮಧ್ಯೆ ಬಾಲಿವುಡ್ ಗೆಳೆತನದ ಕುರಿತು ಸೋನಂ ಕಪೂರ್ ಇಂಟ್ರಸ್ಟಿಂಗ್ ಮಾಹಿತಿಯೊಂದನ್ನು ಹೊರಗೆಡವಿದ್ದಾರೆ. ಬಾಲಿವುಡ್ ಕಲಾವಿದರು ಆತ್ಮೀಯರಾಗಿರುವುದು ಸಾಧ್ಯವಿಲ್ಲವೆಂಬ ಮಾತಿಗೆ ಪ್ರತಿಕ್ರಿಯಿಸಿರುವ ಸೋನಂ ಕಪೂರ್, ಹಾಗೇನಿಲ್ಲ ಕರೀನಾ ಕಪೂರ್, ಜಾಕ್ವೇಲಿನ್ ಫರ್ನಾಂಡೀಸ್ ಹಾಗೂ ಸ್ವರಾ ಭಾಸ್ಕರ್ ನನ್ನ ಬೆಸ್ಟ್ ಫ್ರೆಂಡ್ಸ್ ಎಂದು ಹೇಳಿದ್ದಾರೆ.

ಕೇನ್ಸ್ ಫಿಲ್ಮ್ ಫೆಸ್ಟಿವಲ್ ನಿಂದ ಬಂದ ಬಳಿಕ ಸೋನಂ ಕಪೂರ್ ತಮ್ಮ ಮುಂಬರುವ ಚಿತ್ರ ‘ವೀರ್ ದೆ ವೆಡ್ಡಿಂಗ್’ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದು, ಕಾಕಾತಾಳಿಯವೆಂಬಂತೆ ನಾಲ್ವರು ಸ್ನೇಹಿತೆಯರ ಕಥೆ ಹೊಂದಿರುವ ಶಶಾಂಕ್ ಘೋಷ್ ನಿರ್ದೇಶನದ ಈ ಚಿತ್ರದಲ್ಲಿ ಕರೀನಾ, ಸ್ವರಾ ಸಹ ಅಭಿನಯಿಸಿದ್ದಾರೆ. ಜೊತೆಗೆ ಶಿಖಾ ತಲ್ಸಾನಿಯಾ ಕೂಡಾ ಚಿತ್ರದಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...