alex Certify
ಕನ್ನಡ ದುನಿಯಾ       Mobile App
       

Kannada Duniya

ಲಕ್ಷಾಂತರ ಅಭಿಮಾನಿಗಳ ಹೃದಯ ಕದ್ದ ಬೆಡಗಿ

ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಫ್ಯಾಷನ್ ಕ್ವೀನ್ ಎಂದೇ ಹೆಸರು ಮಾಡಿದ್ದಾಳೆ. ಇತ್ತೀಚಿಗೆ ಕರೀನಾ ಫ್ಯಾಷನ್ ಮತ್ತಷ್ಟು ಪ್ರಸಿದ್ಧಿ ಪಡೆಯುತ್ತಿದೆ. ಜಿಮ್ ಡ್ರೆಸ್ ನಿಂದ ಹಿಡಿದು ಪಾರ್ಟಿ ಲುಕ್ ವರೆಗೆ ಕರೀನಾ ಡ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡ್ತಿದೆ.

ಇತ್ತೀಚೆಗೆ ನಡೆದ Social media Summit Awards 2018 ಕಾರ್ಯಕ್ರಮಕ್ಕೆ ಬಂದಿದ್ದ ಕರೀನಾ ಎಲ್ಲರ ಗಮನ ಸೆಳೆದಿದ್ದಾಳೆ. ಕರೀನಾ Atelier Zuhra ಬ್ರಾಂಡ್ ನ ಸಿಲ್ವರ್ ಮೀರರ್ ಡ್ರೆಸ್ ಧರಿಸಿ ಬಂದಿದ್ದಳು. ಸಿಲ್ವರ್ ಮೀರರ್ ಡ್ರೆಸ್ ನಲ್ಲಿ ಸುಂದರವಾಗಿ ಕಾಣ್ತಿದ್ದ ಕರೀನಾ ವಯಸ್ಸು 38 ಎಂದ್ರೆ ನಂಬೋದು ಕಷ್ಟವಾಗುತ್ತೆ.

ಕರೀನಾ ಡ್ರೆಸ್ ಗೆ ಹೊಂದುವಂತೆ ಮ್ಯಾಚಿಂಗ್ ಚಪ್ಪಲಿ ಧರಿಸಿದ್ದಳು. ಲೈಟ್ ಮೇಕಪ್ ಮಾಡಿದ್ದ ಕರೀನಾ ಕೂದಲನ್ನು ಹರಿಬಿಟ್ಟಿದ್ದಳು. ಸಾಮಾಜಿಕ ಜಾಲತಾಣದಲ್ಲಿ ಕರೀನಾ ಈ ಲುಕ್ ಹರಿದಾಡ್ತಿದೆ. ಕರೀನಾ ಫ್ಯಾಷನ್ ಸೆನ್ಸ್ ಅಭಿಮಾನಿಗಳಿಗೆ ಇಷ್ಟವಾಗಿದೆ. ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ಕರೀನಾ ಈ ಫೋಟೋಕ್ಕೆ ಲೈಕ್ ಒತ್ತಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...