alex Certify
ಕನ್ನಡ ದುನಿಯಾ       Mobile App
       

Kannada Duniya

ಅಮ್ಮನಾದ್ಮೇಲೆ ಮತ್ತಷ್ಟು ಸ್ಲಿಮ್ ಆದ್ಲು ಕರೀನಾ

dsc_8869-compressed

ಛೋಟಾ ನವಾಬ್ ಪತ್ನಿ ಕರೀನಾ ಕಪೂರ್ ಖಾನ್ ಅಮ್ಮನಾದ್ಮೇಲೆ ಮತ್ತಷ್ಟು ಸ್ಲಿಮ್ ಆಗಿದ್ದಾಳೆ. ಡಿಸೆಂಬರ್ ನಲ್ಲಿ ತೈಮೂರ್ ಗೆ ಜನ್ಮ ನೀಡಿದ ಕರೀನಾ ಫಿಗರ್ ನೋಡಿದವರು ಕಣ್ಣು ಕಣ್ಣು ಬಿಡ್ತಿದ್ದಾರೆ. ಮಗುವಾದ್ಮೇಲೆ ತೂಕ ಹೆಚ್ಚಿಸಿಕೊಳ್ಳುವ ಬಾಲಿವುಡ್ ಬೆಡಗಿಯರಲ್ಲಿ ಕರೀನಾ ಭಿನ್ನವಾಗಿ ನಿಲ್ತಾಳೆ.

ಗರ್ಭಿಣಿಯಾದಾಗಿನಿಂದಲೂ ಸುದ್ದಿಯಲ್ಲಿದ್ದ ಕರೀನಾ ತನ್ನ ಕೆಲಸ ಬಿಟ್ಟಿರಲಿಲ್ಲ. ಒಂಭತ್ತು ತಿಂಗಳವರೆಗೂ ಒಂದಲ್ಲ ಒಂದು ಕೆಲಸದಲ್ಲಿ ಬ್ಯುಸಿ ಇದ್ದ ಕರೀನಾ ಅಮ್ಮನಾದ್ಮೇಲೂ ವಿಶ್ರಾಂತಿ ತೆಗೆದುಕೊಳ್ಳಲಿಲ್ಲ. ಫಿಟ್ನೆಸ್ ಗೆ ಹೆಚ್ಚು ಮಹತ್ವ ನೀಡಿದ ಕರೀನಾ ಅಮ್ಮನಾದ ಕೆಲವೇ ದಿನಗಳಲ್ಲಿ ವರ್ಕ್ ಔಟ್ ಶುರುಮಾಡಿದ್ದಳು.

ಸ್ನೇಹಿತೆ ಅಮೃತಾ ಅರೋರಾ ಜೊತೆ ಜಿಮ್ ನಲ್ಲಿ ಕಸರತ್ತು ಮಾಡ್ತಿರುವ ಕೆಲ ಫೋಟೋಗಳು ಈ ಹಿಂದೆ ವೈರಲ್ ಆಗಿದ್ದವು. ಈಗ ಮನೆಯಿಂದ ಜಿಮ್ ಗೆ ಹೋಗ್ತಿದ್ದ ಕರೀನಾಳ ಬ್ಯೂಟಿಯನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ಅಮೃತಾ ಜೊತೆ ಶಾಪಿಂಗ್, ಪಾರ್ಟಿ ಅಂತಾ ಸುತ್ತಾಡುವ ಕರೀನಾ ಸ್ನೇಹಿತೆ ಜೊತೆಯೇ ವ್ಯಾಯಾಮ, ಯೋಗ ಮಾಡ್ತಾಳೆ.

ಸದ್ಯದಲ್ಲಿಯೇ ಕರೀನಾಳ ಮುಂದಿನ ಚಿತ್ರದ ಶೂಟಿಂಗ್ ಶುರುವಾಗಲಿದೆ. ಇಷ್ಟರೊಳಗೆ ಮತ್ತಷ್ಟು ಸ್ಲಿಮ್ ಆಗಬೇಕೆಂಬುದು ಕರೀನಾ ಗುರಿ. ಹಾಗಾಗಿ ಜಿಮ್ ನಲ್ಲಿ ಕಾಲ ಕಳೆಯುತ್ತಿದ್ದಾಳೆ ಬೆಡಗಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...