alex Certify
ಕನ್ನಡ ದುನಿಯಾ       Mobile App
       

Kannada Duniya

15 ತಿಂಗಳಲ್ಲಿ 16 ಕೆ.ಜಿ. ತೂಕ ಇಳಿಸಿಕೊಂಡ ಬೆಡಗಿ

ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಮತ್ತೆ ಸುದ್ದಿಯಲ್ಲಿದ್ದಾಳೆ. ಕರೀನಾ ಸೌಂದರ್ಯ ಈಗ ಮತ್ತೆ ಸುದ್ದಿಗೆ ಬಂದಿದೆ. ಕೆಲ ದಿನಗಳ ಹಿಂದೆ ಫ್ಯಾಷನ್ ಶೋವೊಂದರಲ್ಲಿ ಪಾಲ್ಗೊಂಡಿದ್ದ ಕರೀನಾ ದೇಹ ನೋಡಿ ಎಲ್ಲರೂ ಹುಬ್ಬೇರಿಸಿದ್ರು. ಸರಿಯಾಗಿ ಊಟ ಮಾಡಿ ಮೇಡಂ ಅಂತಾ ಕೆಲವರು ಸಲಹೆ ನೀಡಿದ್ದರು. ಝೀರೋ ಫಿಗರ್ ಅಲ್ಲದಿದ್ರೂ ಕರೀನಾ ತುಂಬಾ ತೆಳ್ಳಗಾಗಿದ್ದಾಳೆ.

ಕರೀನಾ ತೂಕ ಇಳಿಸಿಕೊಂಡಿದ್ದು ಹೇಗೆ ಎಂಬುದನ್ನು ಸಂದರ್ಶನವೊಂದರಲ್ಲಿ ಹೇಳಿದ್ದಾಳೆ. ಮಗ ತೈಮೂರ್ ಜನನದ ವೇಳೆ ಕರೀನಾ ತೂಕ ಏರಿತ್ತು. ಕರೀನಾ ತರಬೇತುದಾರ ನಮ್ರಾತಾ ಪುರೋಹಿತ್ 15 ತಿಂಗಳಲ್ಲಿ ಕರೀನಾ 16 ಕೆ.ಜಿ ತೂಕ ಇಳಿಸಿಕೊಳ್ಳಲು ನೆರವಾಗಿದ್ದಾರಂತೆ.

ಕರೀನಾ ತೈಮೂರು ಜನಸಿದ 45 ದಿನಕ್ಕೆ ನಮ್ರತಾ ಭೇಟಿಯಾಗಿದ್ದಳಂತೆ. ತೂಕ ಇಳಿಸಿಕೊಂಡು ಫಿಟ್ ಆಗಬೇಕು ಎಂದಿದ್ದಳಂತೆ. ತೈಮೂರು ಜನಿಸಿದ ನಂತ್ರ ಯೋಗ ಕ್ಲಾಸ್ ಗೆ ಹೋಗ್ತಿದ್ದ ಕರೀನಾ ನಂತ್ರ ಜಿಮ್ ನಲ್ಲಿ ಬೆವರಿಳಿಸಲು ಶುರು ಮಾಡಿದ್ದಳು.

ವೀರ್ ದಿ ವೆಡ್ಡಿಂಗ್ ನಲ್ಲಿ ನಟಿಸುತ್ತಿರುವ ಕರೀನಾಗೆ ತೂಕ ಇಳಿಸಿಕೊಳ್ಳುವುದು ಬಹಳ ಮುಖ್ಯವಾಗಿತ್ತು. ಶೂಟಿಂಗ್ ಸ್ಥಳದಲ್ಲಿಯೂ ಕರೀನಾ ಊಟ ಹಾಗೂ ತಿಂಡಿ ಬಗ್ಗೆ ಹೆಚ್ಚು ಗಮನ ನೀಡ್ತಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...