alex Certify
ಕನ್ನಡ ದುನಿಯಾ       Mobile App
       

Kannada Duniya

ಏಳು ತಿಂಗಳು ಪೂರ್ಣಗೊಳಿಸಿದ ತೈಮೂರ್ ಮನೆಯಲ್ಲಿ ಸಂಭ್ರಮ

taimur-birthday

ಬಾಲಿವುಡ್ ಬೆಡಗಿ ಕರೀನಾ ಕಪೂರ್ ಖಾನ್ ಹಾಗೂ ಸೈಫ್ ಅಲಿ ಖಾನ್ ಮಗ ತೈಮೂರ್ ಅಲಿ ಖಾನ್ ದೊಡ್ಡವನಾಗಿದ್ದಾನೆ. ಜುಲೈ 20ಕ್ಕೆ 7 ತಿಂಗಳು ಪೂರ್ಣಗೊಂಡಿದೆ. ಇದನ್ನು ಕಪೂರ್ ಕುಟುಂಬ ಸಂಭ್ರಮಿಸಿದೆ. ತೈಮೂರ್ ದೊಡ್ಡಮ್ಮ ನಟಿ ಕರಿಷ್ಮಾ ಕಪೂರ್ ಖಾನ್ ಇನ್ಸ್ಟ್ರಾಗ್ರಾಮ್ ನಲ್ಲಿ ಫೋಟೋ ಪೋಸ್ಟ್ ಮಾಡಿದ್ದಾಳೆ.

ಇನ್ಸ್ಟ್ರಾಗ್ರಾಮ್ ನಲ್ಲಿ ಕೇಕ್ ಫೋಟೋ ಪೋಸ್ಟ್ ಮಾಡಿರುವ ಕರಿಷ್ಮಾ, ತಮ್ಮ ಮಗನಿಗೆ 7 ತಿಂಗಳಾಯ್ತು ಎಂದು ಬರೆದಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ತೈಮೂರ್ ಸೆಲೆಬ್ರಿಟಿಯಾಗಿದ್ದಾನೆ. ಇನ್ನೂ ತೈಮೂರ್ ಗೆ ವರ್ಷ ತುಂಬಿಲ್ಲ. ಆಗ್ಲೇ ತೈಮೂರ್ ಸ್ಟೈಲ್ ಐಕಾನ್ ಆಗಿದ್ದಾನೆ.

ತೈಮೂರ್ ಅಮ್ಮನ ಹೊಟ್ಟೆಯಲ್ಲಿರುವಾಗ್ಲೇ ಸುದ್ದಿಯಲ್ಲಿದ್ದ. ನಂತ್ರ ತೈಮೂರ್ ಹೆಸರು ವಿವಾದಕ್ಕೆ ಕಾರಣವಾಗಿತ್ತು. ದೊಡ್ಡವನಾಗ್ತಿದ್ದಂತೆ ತೈಮೂರ್ ಡ್ರೆಸ್ ಹಾಗೂ ಆತನ ಮುದ್ದು ಮುಖ ಅಭಿಮಾನಿಗಳನ್ನು ಸೆಳೆಯುತ್ತಿದೆ. ದುಬಾರಿ ಬೆಲೆಯ ಬಟ್ಟೆ ತೊಟ್ಟುಕೊಳ್ಳುವ ತೈಮೂರ್ ಆಗಾಗ ಸಾಮಾಜಿಕ ಜಾಲತಾಣ ಹಾಗೂ ಅಮ್ಮ ಕರೀನಾ ಕಂಕುಳಲ್ಲಿ ಕಾಣಿಸಿಕೊಳ್ತಾನೆ. ಸೈಫ್ ಮನೆಯ ಅತಿ ಪುಟಾಣಿ ಪಾಪು ತೈಮೂರ್ ಆಗಿದ್ದು, ಕಪೂರ್ ಹಾಗೂ ನವಾಬ್ ಕುಟುಂಬದ ಅಚ್ಚುಮೆಚ್ಚಿನ ಮಗನಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...