alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಸೆಂಬರ್ 20 ರಂದು ಅಮ್ಮನಾಗಲಿದ್ದಾಳೆ ‘ಬೇಬೋ’

kareena

ನಟಿ ಕರೀನಾ ಕಪೂರ್ ಮಮ್ಮಿಯಾಗ್ತಿರೋದು ಎಲ್ರಿಗೂ ಗೊತ್ತಿದೆ. ತುಂಬು ಗರ್ಭಿಣಿ ಕರೀನಾಳ ಕರುಳ ಕುಡಿ ಭುವಿಗೆ ಬರಲು ಇನ್ನು ಕೆಲವೇ ದಿನಗಳು ಬಾಕಿ ಇವೆ.

ಡಿಸೆಂಬರ್ 20ರಂದು ಬೇಬೋಗೆ ಹೆರಿಗೆಯಾಗಲಿದೆ ಅಂತಾ ವೈದ್ಯರು ತಿಳಿಸಿದ್ದಾರೆ. ಈ ವಿಷಯವನ್ನು ತಂದೆ ರಣಧೀರ್ ಕಪೂರ್ ಸ್ಪಷ್ಟಪಡಿಸಿದ್ದಾರೆ. ತುಂಬು ಗರ್ಭಿಣಿಯಾಗಿದ್ರೂ ಕರೀನಾ ಆರಾಮಾಗಿ ಮನೆಯಲ್ಲಿ ಕುಳಿತಿಲ್ಲ. ಫೋಟೋಶೂಟ್, ಶಾಪಿಂಗ್, ಸಾರ್ವಜನಿಕ ಕಾರ್ಯಕ್ರಮಗಳು ಅಂತಾ ಓಡಾಡ್ತಾನೇ ಇದ್ದಾರೆ. ಇದು ಸೈಫ್ ಅಲಿ ಖಾನ್ ಗೆ ಆತಂಕ ತಂದಿದೆಯಂತೆ.

ಸ್ವಲ್ಪ ಕೆಲಸ ಕಡಿಮೆ ಮಾಡಿ, ಕೂಲಾಗಿರು ಅಂತಾ ಸೈಫ್, ಕರೀನಾಗೆ ಸಲಹೆ ಕೊಟ್ಟಿದ್ದಾರೆ. ಇನ್ನು ಕರೀನಾ ಹಾಗೂ ಸೈಫ್ ಮಗುವಿನ ಆಗಮನಕ್ಕಾಗಿ ಕಾತರರಾಗಿದ್ದು, ಅವರ ಪೋಷಕರು ಕೂಡ ತುದಿಗಾಲಲ್ಲಿದ್ದಾರೆ. ಕರೀನಾ ಶಸ್ತ್ರಚಿಕಿತ್ಸೆಗೆ ಒಳಗಾಗ್ತಾರೋ ಅಥವಾ ಸಹಜ ಹೆರಿಗೆ ಮಾಡಿಸಿಕೊಳ್ತಾರೋ ಅನ್ನೋದು ಸದ್ಯಕ್ಕೆ ನಿರ್ಧಾರವಾಗಿಲ್ಲ. ಅದೇನೇ ಆದ್ರೂ ಸ್ಟಾರ್ ಕಿಡ್ ಜನಿಸುವ ಮುನ್ನವೇ ಸಿಕ್ಕಾಪಟ್ಟೆ ಫೇಮಸ್ ಆಗ್ಬಿಟ್ಟಿದೆ, ಕರೀನಾ ಅಂತೂ ಯಮ್ಮಿ ಮಮ್ಮಿ ಅಂತಾ ಜನ ಮಾತಾಡಿಕೊಳ್ತಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...