alex Certify
ಕನ್ನಡ ದುನಿಯಾ       Mobile App
       

Kannada Duniya

ಕರೀನಾಳನ್ನು ಭೇಟಿ ಮಾಡಲು ಮಯನ್ಮಾರ್ ನಿಂದ ಬಂದ ಯುವತಿ

kareena with her fanಚಿತ್ರ ನಟ- ನಟಿಯರೆಂದರೆ ಹಲವರಿಗೆ ಹುಚ್ಚು ಅಭಿಮಾನ. ತಮ್ಮ ನೆಚ್ಚಿನ ತಾರೆಯರನ್ನು ಪ್ರತ್ಯಕ್ಷವಾಗಿ ಕಾಣಬೇಕು. ಅವರನ್ನು ಮಾತನಾಡಿಸಬೇಕೆಂಬ ಹಂಬಲ ಅಭಿಮಾನಿಗಳಲ್ಲಿರುತ್ತದೆ. ಅದಕ್ಕಾಗಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಅವರು ತಯಾರಿರುತ್ತಾರೆ. ಅಂತಹುದ್ದೇ ಘಟನೆಯೊಂದು ಇಲ್ಲಿದೆ.

ಬಾಲಿವುಡ್ ನಟಿ ಕರೀನಾ ಕಪೂರ್ ಅಭಿಮಾನಿಯೊಬ್ಬರು ನೆಚ್ಚಿನ ನಟಿಯನ್ನು ನೋಡಲು ಮಯನ್ಮಾರ್ ನಿಂದ ಮುಂಬೈಗೆ ಆಗಮಿಸಿದ್ದಾರೆ. 22 ವರ್ಷದ ಕಿರಣ್ ಎಂಬ ಈ ಕಾಲೇಜು ವಿದ್ಯಾರ್ಥಿನಿ ಕರೀನಾಳನ್ನು ಭೇಟಿಯಾಗಲು ನಡೆಸಿದ ಯತ್ನ ಕೊನೆಗೂ ಕೈಗೂಡಿದೆ.

ತಮ್ಮ ಮುಂಬರುವ ಚಿತ್ರದ ಪ್ರಚಾರಾರ್ಥವಾಗಿ ಕರೀನಾ ಮುಂಬೈನ ಲೋಯರ್ ಪರೇಲ್ ನಲ್ಲಿದ್ದ ವೇಳೆ ಕಿರಣ್ ಭೇಟಿ ಮಾಡಿದ್ದಾರೆ. ತಮ್ಮನ್ನು ಭೇಟಿ ಮಾಡಲು ಮಯನ್ಮಾರ್ ನಿಂದ ಆಗಮಿಸಿದ್ದ ಕಿರಣ್ ರನ್ನು ಕರೀನಾ ಅತ್ಮೀಯವಾಗಿ ಬರ ಮಾಡಿಕೊಂಡು ಕೊಂಚ ಕಾಲ ಆಕೆಯೊಂದಿಗೆ ಕಳೆದಿದ್ದಾರೆ. ಆಕೆಯ ವಿದ್ಯಾಭ್ಯಾಸ, ಆಸಕ್ತಿ ಕುರಿತು ವಿಚಾರಿಸಿದ್ದಾಗಿ ಕರೀನಾ ಹೇಳಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...