alex Certify
ಕನ್ನಡ ದುನಿಯಾ       Mobile App
       

Kannada Duniya

ಇತ್ತೀಚೆಗೆ ಈ ನಟನಿಗೆ ಸಿಗ್ತಿಲ್ವಂತೆ ಪತ್ನಿಯ ಮುತ್ತು…!

ಬಾಲಿವುಡ್ ನಟ ಸೈಫ್ ಅಲಿ ಖಾನ್, ಪತ್ನಿ ಕರೀನಾ ಕಪೂರ್ ಖಾನ್ ಹಾಗೂ ತೈಮೂರ್ ಖಾನ್ ಒಂದು ತಿಂಗಳ ಲಂಡನ್ ಪ್ರವಾಸ ಮುಗಿಸಿ ಭಾರತಕ್ಕೆ ವಾಪಸ್ ಆಗಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಸೈಫ್ ಅಲಿ ಖಾನ್ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕರೀನಾ ಹಾಗೂ ತೈಮೂರ್, ಸೈಫ್ ಗೆ ಮುತ್ತು ನೀಡೋದಿಲ್ಲವಂತೆ. ಅದಕ್ಕೆ ಕಾರಣವೇನು ಎಂಬುದನ್ನೂ ಸೈಫ್ ಹೇಳಿದ್ದಾರೆ.

ಸೈಫ್ ಅಲಿ ಖಾನ್ ಹಂಟರ್ ಚಿತ್ರಕ್ಕಾಗಿ ತಯಾರಿ ನಡೆಸಿದ್ದಾರೆ. ನಾಗಾ ಸಾಧು ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಸೈಫ್ ಗಡ್ಡ ಬಿಟ್ಟಿದ್ದಾರೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ನವದೀಪ್ ಸಿಂಗ್ ಇದ್ರ ನಿರ್ದೇಶನ ಮಾಡ್ತಿದ್ದಾರೆ. ಸೈಫ್ ಮಗನಿಗೆ ಮುತ್ತು ನೀಡು ಎಂದ್ರೆ ಮಗ ತೈಮೂರ್ ಕೆನ್ನೆಗೆ ಮುತ್ತಿಡುವ ಬದಲು ಹಣೆ ಮೇಲೆ ಮುತ್ತಿಡುತ್ತಾನಂತೆ. ಕೈಗೆ ಮುತ್ತು ನೀಡು ಎಂದು ತಂದೆಗೆ ಹೇಳ್ತಾನಂತೆ.

ಚಿತ್ರಕ್ಕಾಗಿ ಸೈಫ್ ಸಾಕಷ್ಟು ತಯಾರಿ ನಡೆಸಿದ್ದಾರಂತೆ. ಕೆಲ ಆ್ಯಕ್ಷನ್ ಗಳ ತರಬೇತಿ ಪಡೆದಿದ್ದಾರಂತೆ. ಚಿತ್ರದಲ್ಲಿ ಮಾದವನ್ ನಟಿಸಬೇಕಿತ್ತಂತೆ. ಆದ್ರೆ ಮಾದವನ್ ಗೆ ಗಾಯವಾದ ಕಾರಣ ಬೇರೆಯವರನ್ನು ಆಯ್ಕೆ ಮಾಡಬೇಕಾಯ್ತು ಎಂದು ಸೈಫ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...