alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದೇ ಚಿತ್ರದಲ್ಲಿ ಕರೀನಾ, ಆಲಿಯಾ, ರಣವೀರ್…?

ಬಾಲಿವುಡ್ ನಿರ್ದೇಶಕ ಹಾಗೂ ನಿರ್ಮಾಪಕ, ನಟ ಕರಣ್ ಜೋಹರ್ ಮತ್ತೊಂದು ದೊಡ್ಡ ಪ್ರಾಜೆಕ್ಟ್ ಗೆ ತಯಾರಿ ಶುರು ಮಾಡಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನ ದಿಗ್ಗಜ ಕಲಾವಿದರು ನಟಿಸಲಿದ್ದಾರೆ. ಚಿತ್ರದಲ್ಲಿ ಕರೀನಾ ಕಪೂರ್ ಖಾನ್, ಆಲಿಯಾ ಭಟ್ ಹಾಗೂ ರಣವೀರ್ ಸಿಂಗ್ ಹೆಸರು ಅಂತಿಮಗೊಂಡಿದೆ.

ಕರಣ್ ಜೋಹರ್ ಮೊಘಲರ ಇಬ್ಬರು ಸಹೋದರರ ಕಥೆಯನ್ನು ತೆರೆಯ ಮೇಲೆ ತರಲು ತಯಾರಿ ನಡೆಸಿದ್ದಾರೆ. ಚಿತ್ರದಲ್ಲಿ ಇಬ್ಬರು ಹಿರೋಯಿನ್ ಹಾಗೂ ಇಬ್ಬರು ಹಿರೋಗಳಿರಲಿದ್ದಾರೆ. ರಣವೀರ್ ಸಿಂಗ್ ಸಹೋದರನ ಪಾತ್ರಕ್ಕೆ ಮೊದಲು ರಣಬೀರ್ ಕಪೂರ್ ಹೆಸರು ಕೇಳಿ ಬಂದಿತ್ತು. ಆದ್ರೀಗ ವರುಣ್ ಧವನ್ ನಟಿಸಲಿದ್ದಾರೆಂಬ ಸುದ್ದಿಯಿದೆ. ರಣವೀರ್ ಗೆ ಹಿರೋಯಿನ್ ಆಗಿ ಆಲಿಯಾ ನಟಿಸಲಿದ್ದಾಳೆ. ಕರೀನಾ, ರಣವೀರ್ ಸಹೋದರಿಯಾಗಿ ಕಾಣಿಸಿಕೊಳ್ಳಲಿದ್ದಾಳಂತೆ.

ಮುಂದಿನ ವರ್ಷ ಏಪ್ರಿಲ್ ವೇಳೆಗೆ ಚಿತ್ರ ತೆರೆಗೆ ಬರಲಿದೆಯಂತೆ. ಚಿತ್ರದ ಬಗ್ಗೆ ಕೆಲವೇ ದಿನಗಳಲ್ಲಿ ಅಧಿಕೃತ ಘೋಷಣೆಯಾಗಲಿದೆ. ವರುಣ್ ಗುರುಪೂರ್ಣಿಮೆಯಂದು ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಹೊಸ ಚಿತ್ರದ ಮುನ್ಸೂಚನೆ ಅದು ಎನ್ನಲಾಗ್ತಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...