alex Certify
ಕನ್ನಡ ದುನಿಯಾ       Mobile App
       

Kannada Duniya

ಕರಣ್ ಜೋಹರ್ ಕುರಿತ ರಹಸ್ಯ ಬಯಲು…!

karan-joharನಟಿ ನೇಹಾ ಧೂಪಿಯಾ ಬಾಲಿವುಡ್ ಸೆಲೆಬ್ರಿಟಿಗಳ ರಹಸ್ಯವನ್ನೆಲ್ಲ ಬಿಚ್ಚಿಡ್ತಿದ್ದಾರೆ. ‘ನೋ ಫಿಲ್ಟರ್ ನೇಹಾ’ ಕಾರ್ಯಕ್ರಮದಲ್ಲಿ ಶಾಕಿಂಗ್ ಸೀಕ್ರೆಟ್ ಗಳನ್ನೆಲ್ಲ ಬಾಯ್ಬಿಟ್ಟಿದ್ದಾರೆ.

ಇನ್ನೂ ಮದುವೆಯಾಗದೇ ಬ್ಯಾಚುಲರ್ ಆಗಿಯೇ ಉಳಿದಿರೋ ನಿರ್ದೇಶಕ ಕರಣ್ ಜೋಹರ್ ಸೆಕ್ಸ್ ಮಾಡಿದ ಬಳಿಕ ಶಾಪಿಂಗ್ ಗೆ ಹೋಗಿದ್ದರಂತೆ. ಈ ರಹಸ್ಯವನ್ನು ನೇಹಾ ಧೂಪಿಯಾ ಹೊರಹಾಕಿದ್ದಾರೆ. ಅಷ್ಟೇ ಅಲ್ಲ ನೇಹಾ ಧೂಪಿಯಾರ ಮದುವೆ ಪ್ರಸ್ತಾಪವನ್ನು ಕರಣ್ ತಿರಸ್ಕರಿಸಿದ್ದರಂತೆ.

ಆಕೆ ತನ್ನನ್ನು ಆಕರ್ಷಿಸಿರಲಿಲ್ಲ ಅಂತಾ ಅವರು ನೇರವಾಗಿ ಹೇಳ್ಕೊಂಡಿದ್ದರಂತೆ. ಸೆಕ್ಸ್ ಮತ್ತು ಶಾರೂಕ್ ಎರಡೂ ಚೆನ್ನಾಗಿ ಸೇಲ್ ಆಗುವ ವಸ್ತುಗಳು ಅನ್ನೋದು ಅವರ ಬಿಚ್ಚುನುಡಿ.

‘ನೋ ಫಿಲ್ಟರ್ ನೇಹಾ’ ಕಾರ್ಯಕ್ರಮ 20 ದೇಶಗಳಲ್ಲಿ ಪ್ರಸಾರವಾಗ್ತಾ ಇದೆ. ಕಾರ್ಯಕ್ರಮದ ಹೆಸರೇ ಹೇಳುವಂತೆ ಇಲ್ಲಿ ಎಲ್ಲವೂ ಖುಲ್ಲಂ ಖುಲ್ಲಾ. ಬಾಲಿವುಡ್ ದಿಗ್ಗಜರ ಸೀಕ್ರೆಟ್ ಗಳೆಲ್ಲ ಬಟಾಬಯಲಾಗುತ್ತವೆ. ಕ್ಯಾಮರಾ ಎದುರು ವಿಷಯ ಮುಚ್ಚಿಡುತ್ತಿದ್ದವರ ರಹಸ್ಯವನ್ನೆಲ್ಲ ನೇಹಾ ಬಹಿರಂಗಪಡಿಸ್ತಿದ್ದಾರೆ. ಇದ್ರಲ್ಲಿ ವಿವಾದವೂ ಇದೆ, ತಮಾಷೆ ಕೂಡ ಇದೆ ಎನ್ನುತ್ತಾರೆ ನೇಹಾ. ಬಾಲಿವುಡ್ ನಲ್ಲಿ ಅವಕಾಶಗಳ ಕೊರತೆಯಿಂದ ಮಾಡೆಲಿಂಗ್ ನತ್ತಲೇ ಮುಖ ಮಾಡಿದ್ದ ನೇಹಾ ಧೂಪಿಯಾಗೆ ಈ ಕಾರ್ಯಕ್ರಮ ಬ್ರೇಕ್ ನೀಡಿದ್ರೂ ಆಶ್ಚರ್ಯವಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...