alex Certify
ಕನ್ನಡ ದುನಿಯಾ       Mobile App
       

Kannada Duniya

ಮಲೈಕಾ-ಅರ್ಜುನ್ ಮದುವೆ ಕನ್ಫರ್ಮ್…!

ಬಾಲಿವುಡ್ ನಟಿ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಸುದ್ದಿಯಲ್ಲಿದ್ದಾರೆ. ಇಬ್ಬರು ಮದುವೆಯಾಗ್ತಾರೆಂಬ ಸುದ್ದಿಯಿದೆ. ಈಗ ಮದುವೆ ಕನ್ಫರ್ಮ್ ಆಗಿದೆ. ಮಲೈಕಾ ಆಗ್ಲಿ, ಅರ್ಜುನ್ ಆಗ್ಲಿ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಆದ್ರೆ ನಿರ್ದೇಶಕ ಹಾಗೂ ಮಲೈಕಾ ಬೆಸ್ಟ್ ಫ್ರೆಂಡ್ ಕರಣ್ ಜೋಹರ್ ಇದನ್ನು ಹೇಳಿದ್ದಾರೆ.

ಕಾಫಿ ವಿತ್ ಕರಣ್ ಸರಣಿ -6 ರಲ್ಲಿ ಕರಣ್, ಮಲೈಕಾ-ಅರ್ಜುನ್ ಮದುವೆ ಬಗ್ಗೆ ಸುಳಿವು ನೀಡಿದ್ದಾರೆ. ಕಾಫಿ ವಿತ್ ಕರಣ್-6ನೇ ಸರಣಿಯ ಮೂರನೇ ಗೆಸ್ಟ್ ಅಮೀರ್ ಖಾನ್ ಆಗಿದ್ರು. ಆದ್ರೆ ರ್ಯಾಪರ್ ಫೈರ್ ರೌಂಡ್ ಗೆ ಮಲೈಕಾ ಜಡ್ಜ್ ಆಗಿ ಬಂದಿದ್ದರು. ಈ ವೇಳೆ ಮಲೈಕಾ ಶೀಘ್ರವೇ ಮದುವೆಯಾಗಲಿದ್ದಾರೆಂದು ಕರಣ್ ಸುಳಿವು ನೀಡಿದ್ದಾರೆ.

ಕರಣ್, ಮಲೈಕಾ ಮದುವೆ ಬಗ್ಗೆ ಹೇಳಿಕೆ ನೀಡಿದ್ದು ಇದೇ ಮೊದಲಲ್ಲ. ಈ ಹಿಂದೆ ಯುರೋಪ್ ಪ್ರವಾಸಕ್ಕೆ ಹೋದಾಗ ಕೂಡ ಮಲೈಕಾ ಕಾಲೆಳೆದಿದ್ದರು ಕರಣ್. ಕೆಲ ದಿನಗಳ ಹಿಂದೆ ಪತ್ರಕರ್ತರ ಜೊತೆ ಮಾತನಾಡ್ತಿದ್ದ ಮಲೈಕಾ, ಮದುವೆ ಬಗ್ಗೆ ಕೇಳಿದ ಪ್ರಶ್ನೆಗೆ ನಾಚಿಕೊಂಡಿದ್ದರು.

ಈ ಹಿಂದೆ ದೀಪಿಕಾ ಮದುವೆ, ಪ್ರಿಯಾಂಕ ಮದುವೆ ಬಗ್ಗೆಯೂ ಮೊದಲು ಸುಳಿವು ನೀಡಿದ್ದು ಕರಣ್. ಈ ಬಾರಿ ಕೂಡ ಕರಣ್ ಸುಳಿವು ನೀಡಿದ್ದು, ಇದು ಸತ್ಯವಾಗುವ ಸಾಧ್ಯತೆ ಹೆಚ್ಚಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...