alex Certify
ಕನ್ನಡ ದುನಿಯಾ       Mobile App
       

Kannada Duniya

ಕಂಗನಾ ಕುರಿತು ಕರಣ್ ಶಾಕಿಂಗ್ ಕಮೆಂಟ್

karan

ಕರಣ್ ಜೋಹರ್ ಹಾಗೂ ಕಂಗನಾ ರನಾವತ್ ನಡುವಣ ಸ್ವಜನಪಕ್ಷಪಾತ ವಿಚಾರಕ್ಕೆ ಸಂಬಂಧಪಟ್ಟ ವಿವಾದ ಸದ್ಯಕ್ಕೆ ಮುಗಿಯುವ ಲಕ್ಷಣಗಳಿಲ್ಲ. ಕರಣ್ ಜೋಹರ್ ವಿರುದ್ಧ ಸ್ವಜನಪಕ್ಷಪಾತ ಆರೋಪ ಮಾಡಿದ್ದ ಕಂಗನಾ ಅವರನ್ನು ಮೂವಿ ಮಾಫಿಯಾ ಅಂತಾನೇ ಕರೆದಿದ್ದರು. ಇದಕ್ಕೆ ಕರಣ್ ಕೂಡ ತಿರುಗೇಟು ನೀಡಿದ್ದರು. ಸ್ವಜನಪಕ್ಷಪಾತದ ಬಲಿಪಶು ಎಂಬಂತೆ ವರ್ತಿಸುವ ಅಗತ್ಯವಿಲ್ಲ ಎಂದಿದ್ದರು.

ಬಾಲಿವುಡ್ ನಲ್ಲಿ ಕೆಲವರು ಕಂಗನಾ ಪರವಾಗಿ ಮಾತನಾಡಿದ್ರೆ, ಇನ್ನು ಕೆಲವರು ಕರಣ್ ಜೋಹರ್ ಹೇಳಿದ್ದೇ ಸರಿ ಎಂದಿದ್ದರು. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಕರಣ್ ಜೋಹರ್ ಈ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಕಂಗನಾ ಒಂದು ಕ್ಷಿಪಣಿಯಂತೆ, ನನ್ನನ್ನು ಟಾರ್ಗೆಟ್ ಮಾಡಿ ದಾಳಿ ಮಾಡಿದ್ದಾಳೆ ಎಂದು ನನಗನಿಸಿದೆ. ನಾನು ಸ್ವಜನಪಕ್ಷಪಾತಿಯಲ್ಲ, ಸೆಕ್ಸಿಸ್ಟ್ ಕೂಡ ಅಲ್ಲ ಎಂದಿದ್ದಾರೆ. ಆಕೆಯ ಅದ್ಭುತ ಪ್ರತಿಭೆಯನ್ನು ಗೌರವಿಸುತ್ತೇನೆ, ನಾನೆಂದೂ ಹದ್ದುಮೀರಿ ನಡೆದುಕೊಂಡಿಲ್ಲ ಅಂತಾ ಸಮರ್ಥಿಸಿಕೊಂಡಿದ್ದಾರೆ.

ನಾನು ಕಂಗನಾಳನ್ನು ದ್ವೇಷಿಸುವುದಿಲ್ಲ, ಆಕೆ ಕೂಡ ನನ್ನನ್ನು ದ್ವೇಷಿಸುತ್ತಿಲ್ಲ. ಆದ್ರೆ ನಾನಾಡಿದ ಮಾತುಗಳ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ. ಪಾರ್ಟಿಗೆ ಕಂಗನಾಳನ್ನು ಆಹ್ವಾನಿಸಲು ಮರೆತಿದ್ದೆ ಅಷ್ಟೆ. ಕಂಗನಾ ಯಾವುದೋ ಒಂದು ಕಾರಣವಿಟ್ಟುಕೊಂಡು ನನ್ನನ್ನು ದೂಷಿಸುತ್ತಿದ್ದಾಳೆ ಎಂದಿದ್ದಾರೆ. ಈ ಬಗ್ಗೆ ಕಂಗನಾ ಏನ್ಹೇಳ್ತಾರೆ ಅನ್ನೋ ಕುತೂಹಲ ಇದ್ದೇ ಇದೆ. ಜೊತೆಗೆ ವಿವಾದ ಯಾವಾಗ ತಣ್ಣಗಾಗಬಹುದು ಅನ್ನೋದನ್ನು ಸಹ ಕಾದು ನೋಡಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...