alex Certify
ಕನ್ನಡ ದುನಿಯಾ       Mobile App
       

Kannada Duniya

ಕಳಚಿ ಬಿತ್ತು ಕರಣ್ ಜೋಹರ್ ಮುಖವಾಡ..!

KARAN JOHARಬಹುಷಃ ಇದು ಈ ವರ್ಷದ ಬಾಲಿವುಡ್ ನಲ್ಲಿ ನಡೆದ ಅತಿ ದೊಡ್ಡ ವಿವಾದ. ಖ್ಯಾತ ನಿರ್ದೇಶಕ ಕರಣ್ ಜೋಹರ್ ಹಾಗೂ ಅಜಯ್ ದೇವಗನ್ ನಡುವಣ ಮುಸುಕಿನ ಗುದ್ದಾಟ ಈಗ ಬಯಲಾಗಿದೆ. ಅಸಲಿಗೆ ವಿವಾದ ಶುರುವಾಗಿದ್ದು ಅಜಯ್ ದೇವಗನ್ ರ ‘ಶಿವಾಯ್’ ಹಾಗೂ ಕರಣ್ ಜೋಹರ್ ನಿರ್ದೇಶನದ ‘ಏ ದಿಲ್ ಹೈ ಮುಷ್ಕಿಲ್’ ಸಿನಿಮಾಗಳಿಂದ.

ಇವೆರಡೂ ಚಿತ್ರಗಳು ಒಟ್ಟೊಟ್ಟಿಗೆ ಅಕ್ಟೋಬರ್ 28ರಂದು ರಿಲೀಸ್ ಆಗ್ತಿವೆ. ಬಾಕ್ಸ್ ಆಫೀಸ್ ಫೈಟ್ ಗೂ ಮುನ್ನವೇ ಕರಣ್, ದೇವಗನ್ ವಿರುದ್ಧ ಷಡ್ಯಂತ್ರ ಮಾಡಿದ್ದಾರಂತೆ. ‘ಏ ದಿಲ್ ಹೈ ಮುಷ್ಕಿಲ್’ ಚಿತ್ರವನ್ನು ಹೊಗಳಲು ಮತ್ತು ದೇವಗನ್ ರ ‘ಶಿವಾಯ್’ ಚಿತ್ರದ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಲು ಕಮಾಲ್ ಆರ್.ಖಾನ್ ಗೆ ಕರಣ್ ಜೋಹರ್ 25 ಲಕ್ಷ ರೂಪಾಯಿ ಕೊಟ್ಟಿದ್ದಾರಂತೆ. ಈ ವಿಚಾರವನ್ನು ಕಮಾಲ್ ಖಾನ್, ನಿರ್ಮಾಪಕ ಕುಮಾರ್ ಮಂಗತ್ ಪಾಠಕ್ ಅವರ ಬಳಿ ಬಾಯ್ಬಿಟ್ಟಿದ್ದಾರೆ. ಅವರಿಬ್ಬರ ಫೋನ್ ಸಂಭಾಷಣೆ ಈಗ ಇಂಟರ್ನೆಟ್ ನಲ್ಲಿ ಹರಿದಾಡುತ್ತಿದ್ದು ಭಾರೀ ವಿವಾದ ಎಬ್ಬಿಸಿದೆ.

‘ಶಿವಾಯ್’ ಬಗ್ಗೆ ಕೆಟ್ಟದಾಗಿ ಮಾತನಾಡಲೆಂದೇ ತಾವು ಕರಣ್ ಜೋಹರ್ ಬಳಿ 25 ಲಕ್ಷ ರೂಪಾಯಿ ಪಡೆದಿದ್ದಾಗಿ ಕಮಾಲ್ ಖಾನ್ ಒಪ್ಪಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಟ್ವಿಟ್ಟರ್ ನಲ್ಲಿ ಶಿವಾಯ್ ಬಗ್ಗೆ ಕೆಟ್ಟ ಟೀಕೆ ಮಾಡಿದ್ದ ಕಮಾಲ್ ಖಾನ್, ಕರಣ್ ಜೋಹರ್ ಅವರ ‘ಏ ದಿಲ್ ಹೈ ಮುಷ್ಕಿಲ್’ ಚಿತ್ರದ ಜೊತೆ ಸಂಘರ್ಷಕ್ಕಿಳಿಯದಂತೆ ಅಜಯ್ ದೇವಗನ್ ಗೆ ಸಲಹೆ ನೀಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...