alex Certify
ಕನ್ನಡ ದುನಿಯಾ       Mobile App
       

Kannada Duniya

ತುಂಬಾ ದಿನ ನಡೆಯೋದಿಲ್ಲ ಕಪಿಲ್ ಶರ್ಮಾ ಹೊಸ ಶೋ

kapil_sharma

ಕಾಮಿಡಿಯನ್ ಕಪಿಲ್ ಶರ್ಮಾ `ದ ಕಪಿಲ್ ಶರ್ಮಾ’ ಶೋ ಆರಂಭಿಸಿದ್ದಾರೆ. ಈ ಶೋ ಆರಂಭವಾಗಿ ಎರಡು ದಿನವಾಗಿಲ್ಲ, ಆಗ್ಲೆ ಇದು ಮುಕ್ತಾಯಗೊಳ್ಳುವ ದಿನಾಂಕ ನಿಗದಿಯಾಗಿದೆ. ಆರಂಭಕ್ಕಿಂತ ಮೊದಲೇ ಮುಕ್ತಾಯದ ದಿನವನ್ನು ನಿಗದಿಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಅಭಿಮಾನಿಗಳು ನಿರಾಶೆಗೊಳ್ಳುವ ಅಗತ್ಯವಿಲ್ಲ. ಶೋ ಒಮ್ಮೆ ಮುಕ್ತಾಯಗೊಂಡರೂ ಮತ್ತೆ ಆರಂಭವಾಗುತ್ತೆ. ಕಪಿಲ್ ಪ್ರಕಾರ, ಕಾಮಿಡಿ ನೈಟ್ಸ್ ವಿಥ್ ಕಪಿಲ್ ಶೋವನ್ನು ಕೂಡ ಸರಣಿ ರೀತಿಯಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದ್ರೆ ಪ್ರೇಕ್ಷಕರ ಪ್ರತಿಕ್ರಿಯೆಯಿಂದಾಗಿ ಶೋವನ್ನು ಅಂತ್ಯಗೊಳಿಸಲಾಗಲಿಲ್ಲ. ಆದ್ರೆ ಈ ಶೋದ ಮುಕ್ತಾಯ ದಿನ ನಿಗದಿಯಾಗಿದೆ. 26 ಎಪಿಸೋಡ್ ಮಾಡಲಾಗುತ್ತದೆ. 13 ವಾರಗಳ ಕಾಲ ಅದನ್ನು ಬಿತ್ತರಿಸಲಾಗುತ್ತದೆ.

ನಂತರ ಶೋಗೆ ಸಣ್ಣ ಬ್ರೇಕ್. ವಿಶ್ರಾಂತಿ ನಂತರ ಮತ್ತೆ ಕಪಿಲ್ ಎಂಡ್ ಟೀಂ ವಾಪಸ್ ಬರಲಿದೆ. ಹೀಗೆ ಸರಣಿ ಮುಂದುವರೆಯಲಿದೆ. ಕಪಿಲ್ ತಮ್ಮ ಹೊಸ ಶೋವನ್ನು ದೆಹಲಿಯಲ್ಲಿ ಆರಂಭಿಸಿದ್ದಾರೆ. ಶಾರುಖ್ ಖಾನ್ ಅದ್ಧೂರಿ ಓಪನಿಂಗ್ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...