alex Certify
ಕನ್ನಡ ದುನಿಯಾ       Mobile App
       

Kannada Duniya

ಟಿವಿ ಸೆಲೆಬ್ರಿಟಿ ಲವ್ ನಲ್ಲಿ ಬಿದ್ದ ಕಪಿಲ್ ಶರ್ಮಾ

kapil_16jju_16_06_2016

ಗರ್ಲ್ ಫ್ರೆಂಡ್ ವಿಚಾರಕ್ಕೆ ಮತ್ತೆ ಸುದ್ದಿಯಲ್ಲಿದ್ದಾರೆ ಕಾಮಿಡಿಯನ್ ಕಪಿಲ್ ಶರ್ಮಾ. ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಪ್ರೀತಿ ಸಿಮೋಸ್ ಜೊತೆ ಡೇಟಿಂಗ್ ನಲ್ಲಿದ್ದಾರಂತೆ ಕಪಿಲ್ ಶರ್ಮಾ. ‘ಕಾಮಿಡಿ ನೈಟ್ಸ್ ವಿಥ್ ಕಪಿಲ್ ಶೋ’ ನ ಕ್ರಿಯೇಟಿವ್ ಡೈರೆಕ್ಟರ್ ಆಗಿದ್ದ ಪ್ರೀತಿ, ಕಪಿಲ್ ಶರ್ಮಾ ಇಷ್ಟು ಎತ್ತರಕ್ಕೇರಲು ಸಾಕಷ್ಟು ಕೊಡುಗೆ ನೀಡಿದ್ದಾರೆ.

ಟಿವಿ ಕ್ಷೇತ್ರದಲ್ಲಿ ಪ್ರೀತಿ ಹೆಸರು ಮಾಡಿದ್ದಾರೆ. ಸಣ್ಣ ಪರದೆಯ ದೊಡ್ಡ ಜಗತ್ತಿನಲ್ಲಿ ಪ್ರೀತಿ ಪ್ರಸಿದ್ಧಿ ಗಳಿಸಿದ್ದಾರೆ. ವರದಿಗಳ ಪ್ರಕಾರ ಕಪಿಲ್ ಹಾಗೂ ಪ್ರೀತಿ ಸಂಬಂಧ ಸಾಕಷ್ಟು ಮುಂದುವರೆದಿದೆಯಂತೆ. ಕಾಮಿಡಿ ಸರ್ಕಸ್ ನಲ್ಲಿ ಇವರಿಬ್ಬರ ನಡುವೆ ಸ್ನೇಹ ಶುರುವಾಗಿತ್ತು. ‘ಕಾಮಿಡಿ ನೈಟ್ಸ್ ವಿಥ್ ಕಪಿಲ್’ ನಲ್ಲಿ ಮತ್ತಷ್ಟು ಹತ್ತಿರವಾದ್ರು ಈ ಜೋಡಿ.

ಕಪಿಲ್ ಕಲರ್ಸ್ ಬಿಟ್ಟು ಬಂದಾಗ ಕಲರ್ಸ್ ಜೊತೆ ಇರುವ ಬದಲು ಕಪಿಲ್ ಗೆ ಬೆಂಬಲ ನೀಡಿದ್ದರು ಪ್ರೀತಿ. ಕಪಿಲ್ ಹಾಗೂ ಪ್ರೀತಿ ನಡುವೆ ಪ್ರೀತಿ ಚಿಗುರೊಡೆದಿದೆ ಎನ್ನಲಾಗ್ತಾ ಇದೆ. ಈ ಬಗ್ಗೆ ಕಪಿಲ್, ಪ್ರೀತಿ ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಇಬ್ಬರು ಒಳ್ಳೆಯ ಸ್ನೇಹಿತರು ಎಂದಷ್ಟೇ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...