alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಮಿಡಿ ಸ್ಟಾರ್ ಕಪಿಲ್ ಶರ್ಮಾ ಕಳಕಳಿಗೆ ಹ್ಯಾಟ್ಸಾಫ್

kapil s

ಕಿರುತೆರೆ ವಾಹಿನಿಯಲ್ಲಿ ಹಾಸ್ಯ ಕಾರ್ಯಕ್ರಮದ ಮೂಲಕ ಜನಪ್ರಿಯರಾಗಿರುವ, ಅಪಾರ ವೀಕ್ಷಕರ ಮನಸೆಳೆದ ಕಪಿಲ್ ಶರ್ಮಾ ತಮ್ಮ ಅಭಿಮಾನಿಯ ಜೊತೆಗೆ ಕೆಲ ಸಮಯ ಕಳೆದಿದ್ದಾರೆ. ಮೊದಲು ‘ಕಾಮಿಡಿ ನೈಟ್ಸ್ ವಿತ್ ಕಪಿಲ್ ಶರ್ಮಾ’ ಮೂಲಕ ಜನರನ್ನು ಕಪಿಲ್ ಶರ್ಮಾ ರಂಜಿಸಿದ್ದರು.

ಈಗ ಬೇರೆ ವಾಹಿನಿಯಲ್ಲಿ ‘ದಿ ಕಪಿಲ್ ಶರ್ಮಾ ಶೋ’ ಮೂಲಕ 2ನೇ ಇನ್ನಿಂಗ್ಸ್ ಆರಂಭಿಸಿದ್ದು, ಈ ಕಾರ್ಯಕ್ರಮ ಭಾರೀ ವೀಕ್ಷಕರನ್ನು ಸೆಳೆದಿದೆ. ಕಪಿಲ್ ಶರ್ಮಾ ಶೋಗೆ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಹಿಳೆಯೊಬ್ಬರು ಭೇಟಿ ನೀಡಿದ್ದಾರೆ. ಮಹಿಳೆ ತಮ್ಮ ಪುತ್ರಿಯೊಂದಿಗೆ ಆಗಮಿಸಿದ್ದು, ಇವರನ್ನು ಗಮನಿಸಿದ ಕಪಿಲ್ ಶರ್ಮಾ ಶೂಟಿಂಗ್ ನಿಲ್ಲಿಸಿ ಅವರೊಂದಿಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಕ್ಯಾನ್ಸರ್ ಪೀಡಿತ ಮಹಿಳೆ, ಜೀವನದಲ್ಲಿ ಕ್ಯಾನ್ಸರ್ ನಿಂದಾಗಿ ಸಂಕಟ ಅನುಭವಿಸುತ್ತಿದ್ದು, ನಿಮ್ಮ ಕಾರ್ಯಕ್ರಮ ನೋಡಿ ನಗುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಆ ಮಹಿಳೆಯೊಂದಿಗೆ ಕೆಲ ಸಮಯ ಕಳೆದ ಕಪಿಲ್ ಶರ್ಮಾ, ಅವರ ಆಸೆಯಂತೆ ತಮ್ಮ ಇಡೀ ತಂಡದ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾರೆ. ಒತ್ತಡದ ನಡುವೆಯೂ ಮಹಿಳೆಯ ಆಸೆಯಂತೆ, ಅವರೊಂದಿಗೆ ಮಾತನಾಡಿ, ಪೋಟೋ ತೆಗೆಸಿಕೊಂಡಿರುವ ಶರ್ಮಾ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...