alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ಅವತಾರದಲ್ಲಿ ಬರುತ್ತಿದ್ದಾರೆ ಕಪಿಲ್ ಶರ್ಮಾ

ಕಪಿಲ್ ಶರ್ಮಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ವಾರಾಂತ್ಯದಲ್ಲಿ ತಮ್ಮ ಕಾಮಿಡಿ ಪಂಚ್ ಗಳ ಮೂಲಕ ಅಭಿಮಾನಿಗಳು ಹೊಟ್ಟೆ ಹುಣ್ಣಾಗುವ ರೀತಿಯಲ್ಲಿ ನಗಿಸುತ್ತಿದ್ದ ಹಾಸ್ಯ ಕಲಾವಿದ, ಬೇರೆ ಅವತಾರದಲ್ಲಿ ತಮ್ಮ ಅಭಿಮಾನಿಗಳಿಗೆ ದರ್ಶನ ನೀಡಲಿದ್ದಾರೆ.

ಕಪಿಲ್, ಪಂಜಾಬಿ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವುದಾಗಿ ತಮ್ಮ ಟ್ವಿಟರ್ ನಲ್ಲಿ ಹಾಕಿಕೊಂಡಿದ್ದಾರೆ. ‘ಸನ್ ಆಫ್ ಮಂಜೀತ್ ಸಿಂಗ್’ ಹೆಸರಿನಲ್ಲಿ ಚಿತ್ರ ತೆರೆಗೆ ಬರಲಿದೆ. ಈ ಚಿತ್ರಕ್ಕಾಗಿ ಕಪಿಲ್ ಸಾಕಷ್ಟು ಶ್ರಮಿಸಿರೋದಾಗಿ ತಿಳಿದು ಬಂದಿದೆ. ಈ ಚಿತ್ರದ ಟೀಸರ್ ಸದ್ಯದಲ್ಲೇ ಬಿಡುಗಡೆ ಆಗಲಿದ್ದು, ಚಿತ್ರ ಅಕ್ಟೋಬರ್ 12 ರಂದು ತೆರೆಗೆ ಬರಲಿದೆ. ಚಿತ್ರದ ಕುರಿತಾದ ಮುಖ್ಯ ಮಾಹಿತಿಯನ್ನು ಸಹ ವಿಡಿಯೋ ಮೂಲಕ ಕಪಿಲ್ ಹಾಕಿದ್ದು, ಅಭಿಮಾನಿಗಳನ್ನು ಸೆಳೆಯುತ್ತಿದೆ.

ಕಪಿಲ್ ಮತ್ತೆ ಅಭಿಮಾನಿಗಳ ಮನ ಗೆಲ್ಲಲು ಈ ಚಿತ್ರ ನೆರವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರದ ಮೂಲಕ ಕಪಿಲ್ ಕೆಲವು ದಿನಗಳಿಂದ ಅನುಭವಿಸುತ್ತಿದ್ದ ಖಿನ್ನತೆ ಹಾಗೂ ನೋವಿನಿಂದ ಹೊರ ಬಂದು ಹೊಸ ಜೀವನ ಆರಂಭಿಸಲು, ಚಿತ್ರ ವೇದಿಕೆ ಆಗಬೇಕಿದೆ. ಇನ್ನು ಮತ್ತೆ ಕಿರುತೆರೆಯ ಮೇಲೆ ಸದ್ದು ಮಾಡಲು ಕಪಿಲ್ ಕಸರತ್ತು ಸಹ ನಡೆಸಿರೋದು ತಿಳಿದುಬಂದಿದೆ. ಒಂದೊಮ್ಮೆ ಈ ಪ್ರಯತ್ನದಲ್ಲಿ ಹಾಸ್ಯ ಕಲಾವಿದ ಯಶಸ್ವಿಯಾದ್ರೆ, ಮತ್ತೊಮ್ಮೆ ಅಭಿಮಾನಿಗಳಿಗೆ ಭರ್ಜರಿ ಮನೋರಂಜನೆ ಫಿಕ್ಸ್. ಚಿತ್ರದ ಇನ್ನೋರ್ವ ನಿರ್ಮಾಪಕ ಸುಮಿತ್ ಸಿಂಗ್, ಕಪಿಲ್ ಜೊತೆಗೆ ಕೆಲಸ ಮಾಡಲು ಖುಷಿ ಆಗುತ್ತದೆ. ಸದ್ಯದಲ್ಲೇ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡುವ ಪ್ಲಾನ್ ಇದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...