alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಮಿಡಿಯನ್ ಕಪಿಲ್ ಶರ್ಮಾಗೆ ಸಂಕಷ್ಟಗಳ ಸರಮಾಲೆ

kapil

ಕುಡಿದ ಅಮಲಲ್ಲಿ ಮಾಡಿದ ಅವಾಂತರದಿಂದ ಕಿರುತೆರೆಯ ಕಾಮಿಡಿ ಕಿಂಗ್ ಎನಿಸಿಕೊಂಡಿದ್ದ ಕಪಿಲ್ ಶರ್ಮಾಗೆ ಒಂದೊoದಾಗೇ ಸಂಕಷ್ಟಗಳು ಶುರುವಾಗ್ತಿವೆ. ಸಹ ಕಲಾವಿದ ಸುನಿಲ್ ಗ್ರೋವರ್ ಮೇಲೆ ಕಪಿಲ್ ಶರ್ಮಾ ಹಲ್ಲೆ ಮಾಡಿದ್ದರಿಂದ ‘ದಿ ಕಪಿಲ್ ಶರ್ಮಾ ಶೋ’ನ ಉಳಿದ ಕಲಾವಿದರು ಕೂಡ ಮುನಿಸಿಕೊಂಡಿದ್ದಾರೆ.

ಡಾ.ಗುಲಾಟಿ ಅವತಾರದಲ್ಲಿ ಸುನಿಲ್ ಗ್ರೋವರ್ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ರು. ಅವರಿಲ್ಲದೆ ‘ದಿ ಕಪಿಲ್ ಶರ್ಮಾ ಶೋ’ ತನ್ನ ಮೊನಚು ಕಳೆದುಕೊಂಡಿದೆ. ಇನ್ನೊಂದ್ಕಡೆ ಸೋನಿ ವಾಹಿನಿ ‘ದಿ ಕಪಿಲ್ ಶರ್ಮಾ ಶೋ’ನ 106 ಕೋಟಿ ಒಪ್ಪಂದವನ್ನು ಇದೇ ತಿಂಗಳಲ್ಲಿ ನವೀಕರಣ ಮಾಡಿಕೊಳ್ಳಬೇಕಿತ್ತು.

ಆದ್ರೆ ಒಪ್ಪಂದ ನವೀಕರಣ ಮಾಡದೇ ಇರಲು ವಾಹಿನಿ ನಿರ್ಧರಿಸಿದೆ ಎನ್ನಲಾಗ್ತಿದೆ. ಇನ್ನೊಂದೆಡೆ ಕಪಿಲ್ ಶರ್ಮಾಗೆ ನೋಟಿಸ್ ನೀಡಿರುವ ವಾಹಿನಿ ಇನ್ನೊಂದು ತಿಂಗಳು ಕಾಲಾವಕಾಶ ನೀಡಿದೆ. ಅಷ್ಟರಲ್ಲಿ ಶೋ ಮತ್ತದೆ ಜನಪ್ರಿಯತೆ ಪಡೆಯುವಂತೆ ಮಾಡಬೇಕೆಂದು ಕಪಿಲ್ ಗೆ ಸೂಚಿಸಿದೆ. ಹಾಗಾದಲ್ಲಿ ಮಾತ್ರ ಕಪಿಲ್ ಜೊತೆಗಿನ ಕಾಂಟ್ರಾಕ್ಟ್ ಅನ್ನು ವಾಹಿನಿ ಮುಂದುವರಿಸಲಿದೆ.

ಸುನಿಲ್ ಗ್ರೋವರ್, ಚಂದನ್ ಪ್ರಭಾಕರ್, ಅಲಿ ಅಸ್ಗರ್ ಹಾಗೂ ಸುಗಂಧಾ ಮಿಶ್ರಾ ಮತ್ತೆ ಕಪಿಲ್ ಕಾರ್ಯಕ್ರಮಕ್ಕೆ ವಾಪಸ್ಸಾಗದೇ ಇರಲು ನಿರ್ಧರಿಸಿದ್ದಾರೆ. ಪ್ರಮುಖ ಕಲಾವಿದರೇ ಇಲ್ಲದಿರೋದ್ರಿಂದ ಕಪಿಲ್ ಶೋಗೆ ಟಿಆರ್ ಪಿ ಬರ್ತಾ ಇಲ್ಲ. ಸುನಿಲ್ ಬದಲು ಕಾಮಿಡಿಯನ್ ರಾಜು ಶ್ರೀವಾಸ್ತವ ಅವರನ್ನು ಕಪಿಲ್ ಕಾರ್ಯಕ್ರಮಕ್ಕೆ ಕರೆತಂದಿದ್ರು. ಆದ್ರೆ ರಾಜು ಕೂಡ ಯಾವುದೇ ಮ್ಯಾಜಿಕ್ ಮಾಡಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...