alex Certify
ಕನ್ನಡ ದುನಿಯಾ       Mobile App
       

Kannada Duniya

ನಗಲು ರೆಡಿಯಾಗಿ, ‘ಕಾಮಿಡಿ ವಿತ್ ಕಪಿಲ್’ ರೀ ಎಂಟ್ರಿ

Kapil_Sharma_

ಕಿರುತೆರೆ ವಾಹಿನಿಯಲ್ಲಿ ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿದ್ದ ‘ಕಾಮಿಡಿ ನೈಟ್ಸ್ ವಿತ್ ಕಪಿಲ್’ ಕಾರಣಾಂತರದಿಂದ ಸ್ಥಗಿತಗೊಂಡಿತ್ತು. ಇದು ವೀಕ್ಷಕರಲ್ಲಿ ಬೇಸರ ಮೂಡಿಸಿದ್ದರೂ ಬದಲಾದ ರೂಪದಲ್ಲಿ ಭಾರತಿ ಮೊದಲಾದವರು ನಡೆಸಿಕೊಡುತ್ತಿರುವ ‘ಕಾಮಿಡಿ ನೈಟ್ಸ್ ಲೈವ್’ ಜನರನ್ನು ಮೋಡಿ ಮಾಡಿದೆ.

‘ಕಾಮಿಡಿ ವಿತ್ ಕಪಿಲ್’, ಕಪಿಲ್ ಶರ್ಮ ಅವರು ನಡೆಸಿಕೊಟ್ಟ ಅಪರೂಪದ ಹಾಸ್ಯ ಕಾರ್ಯಕ್ರಮ. ಕಪಿಲ್ ಶರ್ಮ ಅವರ ಪಂಚಿಂಗ್ ಡೈಲಾಗ್, ಸ್ಪಾಂಟೇನಿಯಸ್ ಆಗಿ ಬರುವ ಮಾತುಗಳು ವೀಕ್ಷಕರಿಗೆ ಸಖತ್ ಖುಷಿ ಕೊಟ್ಟಿದ್ದವು. ಆದರೆ, ಇದ್ದಕ್ಕಿದ್ದಂತೆ ಕಾರ್ಯಕ್ರಮ ನಿಲ್ಲಲಿದೆ ಎಂಬ ಮಾಹಿತಿ ಹೊರಬಿದ್ದಾಗ ವೀಕ್ಷಕರು ಬೇಸರಿಸಿಕೊಂಡಿದ್ದರು. ಅದನ್ನು ‘ಕಾಮಿಡಿ ನೈಟ್ಸ್ ಲೈವ್’ ಫುಲ್ ಫಿಲ್ ಮಾಡುತ್ತಿದೆ. ಹೀಗಿರುವಾಗಲೇ ಮತ್ತೊಂದು ಹೊಸ ಮಾಹಿತಿ ಬಂದಿದೆ.

‘ಕಾಮಿಡಿ ನೈಟ್ಸ್ ವಿತ್ ಕಪಿಲ್’ ಮತ್ತೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮ ಹೊಸ ಹೆಸರಿನಲ್ಲಿ ಅಂದರೆ, ‘ಕಾಮಿಡಿ ಸ್ಮೈಲ್’ ಹೆಸರಿನಲ್ಲಿ ಸೋನಿ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಪ್ರೋಗ್ರಾಂ ಪ್ರೋಮೋವನ್ನು ಕಪಿಲ್ ಶರ್ಮ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಶೀಘ್ರದಲ್ಲಿಯೇ ಕಾರ್ಯಕ್ರಮ ಪ್ರಸಾರವಾಗಲಿದ್ದು, ಇದಕ್ಕಾಗಿ ಸಿದ್ಧತೆಗಳು ನಡೆದಿವೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...