alex Certify
ಕನ್ನಡ ದುನಿಯಾ       Mobile App
       

Kannada Duniya

ಕಪಿಲ್ ಶರ್ಮಾ ಆರೋಗ್ಯದಲ್ಲಿ ಮತ್ತೆ ಏರುಪೇರು

kapil-sharma-hospital

ಹಾಸ್ಯ ಕಲಾವಿದ ಕಪಿಲ್ ಶರ್ಮಾಗೆ ಏಕಾಏಕಿ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆರೋಗ್ಯ ಸುಧಾರಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಕಪಿಲ್ ವಾಪಸ್ ಆಗಿದ್ದಾರೆಂದು ಮೂಲಗಳು ಹೇಳಿವೆ.

ಗಂಭೀರವಾಗಿ ಕಪಿಲ್ ಅಸ್ವಸ್ಥರಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತೆಂದು ಮೂಲಗಳು ಹೇಳಿವೆ. ‘ಜಬ್ ಹ್ಯಾರಿ ಮೆಟ್ ಸೇಜಲ್’ ಚಿತ್ರದ ಪ್ರಚಾರಕ್ಕಾಗಿ ಶಾರುಕ್ ಖಾನ್ ‘ದಿ ಕಪಿಲ್ ಶರ್ಮಾ ಶೋ’ ಗೆ ಬರುವವರಿದ್ದರು. ಕಪಿಲ್ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಶೂಟಿಂಗ್ ರದ್ದು ಮಾಡಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಹಿಂದಿನ ತಿಂಗಳು ಕಪಿಲ್ ಗೆ ರಕ್ತದೊತ್ತಡದ ಸಮಸ್ಯೆ ಕಾಣಿಸಿಕೊಂಡಿತ್ತು. ತಕ್ಷಣ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದರು. ಕೆಲ ತಿಂಗಳ ಹಿಂದೆ ನಡೆದ ಗಲಾಟೆಯಿಂದ ಕಪಿಲ್ ಒತ್ತಡಕ್ಕೊಳಗಾಗಿದ್ದಾರೆ. ಹೊಸ ಕಾಮಿಡಿ ಶೋ ‘ದಿ ಡ್ರಾಮಾ ಕಂಪನಿ’ ಜೊತೆ ‘ದಿ ಕಪಿಲ್ ಶರ್ಮಾ ಶೋ’ ಟಿ ಆರ್ ಪಿ ಕಡಿಮೆಯಾಗುವ ಸಾಧ್ಯತೆ ಇದ್ದು. ಇದು ಕಪಿಲ್ ಒತ್ತಡ ಹೆಚ್ಚಾಗಲು ಕಾರಣವಾಗಿದೆ. ಹಾಗಾಗಿ ಪದೇ ಪದೇ ಕಪಿಲ್ ಆರೋಗ್ಯದಲ್ಲಿ ಏರುಪೇರಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...