alex Certify
ಕನ್ನಡ ದುನಿಯಾ       Mobile App
       

Kannada Duniya

‘ಕನ್ನಡದ ಕೋಟ್ಯಾಧಿಪತಿ’ಯಾಗಲಿದ್ದಾರಾ ಸುಜಾತ?

ಹಿರಿಯ ನಟ ರಮೇಶ್ ಅರವಿಂದ್ ಅವರು ನಡೆಸಿಕೊಡುತ್ತಿರುವ ‘ಕನ್ನಡದ ಕೋಟ್ಯಾಧಿಪತಿ’ ಕಾರ್ಯಕ್ರಮ ವೀಕ್ಷಕರ ಮನ ಸೆಳೆದಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಇಂದಿನ ಸಂಚಿಕೆ ವಿಶೇಷ ಕಾರಣಕ್ಕೆ ಎಲ್ಲರ ಕುತೂಹಲ ಕೆರಳಿಸಿದೆ.

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಸುಜಾತ ಹೋಲ್ಕರ್ ಎಂಬವರು ಈಗಾಗಲೇ 25 ಲಕ್ಷ ರೂ. ಗೆದ್ದುಕೊಂಡಿದ್ದಾರೆ. ಅವರ ಬಳಿ ಈಗ ಒಂದು ಲೈಫ್ ಲೈನ್ ಉಳಿದಿದ್ದು, ಇಂದು ಪ್ರಸಾರವಾಗುವ ಕಾರ್ಯಕ್ರಮದಲ್ಲಿ ರಮೇಶ್ ಅರವಿಂದ್ ಅವರು ಕೇಳುವ 2 ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದರೆ ಸುಜಾತ ‘ಕನ್ನಡದ ಕೋಟ್ಯಾಧಿಪತಿ’ ಯಾಗಲಿದ್ದಾರೆ.

ಬಿಎ ಪದವೀಧರೆಯಾಗಿರುವ ಸುಜಾತ ಬಾಲ್ಯದಲ್ಲೇ ವಿವಾಹ ಬಂಧನಕ್ಕೊಳಗಾದವರು. ಇಂದು ರಾತ್ರಿ 8 ಗಂಟೆಗೆ ಪ್ರಸಾರವಾಗಲಿರುವ ಸಂಚಿಕೆಯಲ್ಲಿ ಸರಿ ಉತ್ತರ ನೀಡಿ ಕೋಟಿ ರೂಪಾಯಿ ಗೆಲ್ಲುತ್ತಾರಾ ಸುಜಾತ ಎಂಬುದು ಕನ್ನಡಿಗರ ಕುತೂಹಲಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...