alex Certify
ಕನ್ನಡ ದುನಿಯಾ       Mobile App
       

Kannada Duniya

ಇಟಲಿಯಲ್ಲಿ ಪ್ರದರ್ಶನವಾದ ಕನ್ನಡ ಚಲನಚಿತ್ರ

Kannada

ಹೇಮಂತ್ ಕುಮಾರ್ ನಿರ್ದೇಶನದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಜುಲೈ 30 ರ ಶನಿವಾರದಂದು ಇಟಲಿಯಲ್ಲಿ ಪ್ರದರ್ಶನ ಕಂಡಿದೆ. ಈ ಮೂಲಕ ಇದು ಇಟಲಿಯಲ್ಲಿ ಪ್ರದರ್ಶನ ಕಂಡ ಮೊಟ್ಟಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಜುಲೈ 30 ರಂದು ಇಟಲಿಯ ಮಿಲಾನ್ ನಗರದ ಪ್ಯಾಲೆಸ್ತ್ರಿಯಾ ಚಿತ್ರಮಂದಿರದಲ್ಲಿ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಪ್ರದರ್ಶನ ಕಂಡಿತು. ಇದಕ್ಕೂ ಮುಂಚೆ ಅಮೆರಿಕಾ, ಸಿಂಗಾಪುರದಲ್ಲಿ ಬಿಡುಗಡೆಯಾಗಿರುವ ಈ ಚಿತ್ರ ಪ್ರೇಕ್ಷಕರ ಮನ ಗೆದ್ದಿತ್ತು. ಅಮೆರಿಕಾದಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಸಿದ ಖ್ಯಾತಿ ಗೋಧಿ ಬಣ್ಣ ಚಿತ್ರಕ್ಕೆ ಸಲ್ಲುತ್ತದೆ.

ಚಿತ್ರದ ಆಯೋಜಕತ್ವವನ್ನು ಸ್ಯಾಂಡಲ್ ವುಡ್ ಟಾಕೀಸ್, ಮಿಲಾನೋ ಕನ್ನಡ ಸಂಘವು ಜಂಟಿಯಾಗಿ ನಡೆಸಿದೆ. ಈ ಚಿತ್ರದಲ್ಲಿ ಅನಂತನಾಗ್, ಶೃತಿ ಹರಿಹರನ್, ರಕ್ಷಿತ್ ಶೆಟ್ಟಿ ಮೊದಲಾದವರು ನಟಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...