alex Certify
ಕನ್ನಡ ದುನಿಯಾ       Mobile App
       

Kannada Duniya

ಝಾನ್ಸಿ ಕಿ ರಾಣಿ ಲುಕ್ ನಲ್ಲಿ ಕಂಗನಾ ಮಿಂಚಿಂಗ್

ಬಾಲಿವುಡ್ ಬೆಡಗಿ ಕಂಗನಾ ಝಾನ್ಸಿ ರಾಣಿಯಾಗಿ ಆದಷ್ಟು ಬೇಗ ತೆರೆ ಮೇಲೆ ಬರಲಿದ್ದಾಳೆ. ಸಿಮ್ರನ್ ನಂತ್ರ ಕಂಗನಾ ಅಭಿಮಾನಿಗಳು ಝಾನ್ಸಿ ರಾಣಿಗಾಗಿ ಕಾಯುತ್ತಿದ್ದಾರೆ. ಚಿತ್ರದ ಮೊದಲ ಫೋಟೋ ಬಿಡುಗಡೆಯಾಗಿದೆ. ಕಂಗನಾಳ ಅಭಿಮಾನಿ ಟ್ವೀಟರ್ ಅಕೌಂಟ್ ನಲ್ಲಿ ಇದನ್ನು ಬಿಡುಗಡೆ ಮಾಡಲಾಗಿದೆ.

ಬಿಳಿ ಬಣ್ಣದ ರಾಜನ ಉಡುಗೆ ತೊಟ್ಟಿರುವ ಕಂಗನಾ ತಲೆಗೆ ಪೇಟ ಹಾಕಿದ್ದಾಳೆ. ಸುಂದರ ರಾಯಲ್ ಉಡುಗೆಯಲ್ಲಿ ಕಂಗನಾ ಮಿಂಚಿದ್ದು, ಕಂಗನಾ ಝಾನ್ಸಿ ಲುಕ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಈ ಫೋಟೋವನ್ನು ಸಿನಿಮಾ ಸೆಟ್ ನಲ್ಲಿ ಕ್ಲಿಕ್ ಮಾಡಲಾಗಿದೆ.

ಈ ಚಿತ್ರಕ್ಕಾಗಿ ಕಂಗನಾ ಭರ್ಜರಿ ತಯಾರಿ ಮಾಡಿಕೊಂಡಿದ್ದಾಳೆ. ಚಿತ್ರದ ಯುದ್ಧದ ದೃಶ್ಯವನ್ನು ಸುಂದರವಾಗಿ ಶೂಟ್ ಮಾಡಲಾಗಿದೆ. ಯುದ್ಧದ ದೃಶ್ಯ ಚಿತ್ರೀಕರಿಸುವ ವೇಳೆ ಕಂಗನಾಗೆ ಗಾಯ ಕೂಡ ಆಗಿತ್ತು. ಈ ಹಿಂದೆ ಸಂದರ್ಶನವೊಂದರಲ್ಲಿ  ಮಾತನಾಡಿದ್ದ ಕಂಗನಾ, ರಾಣಿ ಲಕ್ಷ್ಮಿ ಬಾಯಿ ಅದ್ಭುತ ಮಹಿಳೆ. ಸಣ್ಣ ವಯಸ್ಸಿನಲ್ಲಿಯೇ ಸಾಕಷ್ಟು ಯದ್ಧವನ್ನು ಎದುರಿಸಿದ್ದಳು. ಆಕೆಯ ಹಾಗೆ ಡ್ರೆಸ್ ತೊಟ್ಟು, ಬಣ್ಣ ಹಚ್ಚಿಕೊಂಡ್ರೆ ರಾಣಿ ಲಕ್ಷ್ಮಿಬಾಯಿಯಾಗಲು ಸಾಧ್ಯವಿಲ್ಲ. ಝಾನ್ಸಿ ರಾಣಿ ಪಾತ್ರದಲ್ಲಿ ಮಿಂಚುವಾಗ ಸಣ್ಣಪುಟ್ಟ ಗಾಯ ಮಾಮೂಲಿ ಎಂದಿದ್ದಳು ಕಂಗನಾ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...