alex Certify
ಕನ್ನಡ ದುನಿಯಾ       Mobile App
       

Kannada Duniya

ಮಣಿಕರ್ಣಿಕಾ ಚಿತ್ರೀಕರಣದ ವೇಳೆ ಗಾಯಗೊಂಡ ಕಂಗನಾ

ಬಾಲಿವುಡ್ ನಟಿ ಕಂಗನಾ, ಮಣಿಕರ್ಣಿಕಾ ಚಿತ್ರದ ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾಳೆ. ಜೋಧಪುರ್ ಕೋಟೆಯಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಫೈಟಿಂಗ್ ಚಿತ್ರದ ಚಿತ್ರೀಕರಣದ ವೇಳೆ ಕಂಗನಾ ಕಾಲಿಗೆ ಗಾಯವಾಗಿದೆ.

ಕತ್ತಿವರಸೆ ಚಿತ್ರೀಕರಣದ ವೇಳೆ ಕಂಗನಾ ಕಾಲಿಗೆ ಗಾಯವಾಗಿದೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ವಿಶ್ರಾಂತಿಗಾಗಿ ಕಂಗನಾ ಮುಂಬೈಗೆ ತೆರಳಿದ್ದಾಳೆಂದು ಚಿತ್ರ ತಂಡ ಹೇಳಿದೆ. ಮಣಿಕರ್ಣಿಕಾ ಚಿತ್ರಕ್ಕಾಗಿ ಕಂಗನಾ ಸಾಕಷ್ಟು ತಯಾರಿ ನಡೆಸಿದ್ದಾಳೆ. ಕತ್ತಿ ವರಸೆ ತರಬೇತಿ ಕೂಡ ಪಡೆದಿದ್ದಳು.

ಕೆ. ವಿಜಯೇಂದ್ರ ಪ್ರಸಾದ್ ಚಿತ್ರವನ್ನು ನಿರ್ದೇಶನ ಮಾಡ್ತಿದ್ದಾರೆ. ಬಾಹುಬಲಿ ಹಾಗೂ ಭಜರಂಗಿ ಭಾಯಿ ಜಾನ್ ಗೆ ಚಿತ್ರ ಕಥೆ ಬರೆದಿದ್ದ ವಿಜಯೇಂದ್ರ, ಮಣಿಕರ್ಣಿಕಾ ಚಿತ್ರಕ್ಕೂ ಕಥೆ ಬರೆದಿದ್ದಾರೆ. ಮಣಿಕರ್ಣಿಕಾ ಜೋದ್ಪುರದ ರಾಣಿಯ ಕಥೆಯಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...