alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಹಿದ್ ಜೊತೆ ಕಳೆದ ಆ ರಾತ್ರಿ ಬಗ್ಗೆ ಕಂಗನಾ ಹೇಳಿದ್ದೇನು?

god-22

ಬಾಲಿವುಡ್ ನಟ ಶಾಹಿದ್ ಕಪೂರ್ ಹಾಗೂ ಕಂಗನಾ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಈಗ ಕಂಗನಾ ಶಾಹಿದ್ ಬಗ್ಗೆ ಆಶ್ಚರ್ಯಪಡುವಂತಹ ವಿಷಯವೊಂದನ್ನು ಹೊರಹಾಕಿದ್ದಾಳೆ. ಸಂದರ್ಶನವೊಂದರಲ್ಲಿ ಮಾತನಾಡಿದ ಕಂಗನಾ, ಒಂದೇ ಕಾಟೇಜ್ ನಲ್ಲಿ ಒಂದು ವಾರ ಶಾಹಿದ್ ಜೊತೆ ಕಳೆದಿದ್ದು, ಆ ಅನುಭವವನ್ನು ಬಿಚ್ಚಿಟ್ಟಿದ್ದಾಳೆ.

‘ರಂಗೂನ್’ ಶೂಟಿಂಗ್ ವೇಳೆ ನಡೆದ ಘಟನೆಯನ್ನು ಕಂಗನಾ ಬಿಚ್ಚಿಟ್ಟಿದ್ದಾಳೆ. ಮನೆ-ಹೊಟೇಲ್ ಏನೂ ಇಲ್ಲದ ಪ್ರದೇಶದಲ್ಲಿ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಒಂದು ಕಾಟೇಜ್ ನಲ್ಲಿಯೇ ಶಾಹಿದ್ ಹಾಗೂ ಇಡೀ ಚಿತ್ರತಂಡ ಒಂದು ವಾರ ಕಳೆದಿತ್ತು. ಸ್ನಾನಕ್ಕೆ, ಬಟ್ಟೆ ಬದಲಾಯಿಸಲೂ ಸರಿಯಾದ ಸ್ಥಳವಿರಲಿಲ್ಲ. ಇದೆಲ್ಲ ಹೇಗೋ ಆಯ್ತು. ಆದ್ರೆ ಶಾಹಿದ್ ಬೆಳ್ಳಂಬೆಳಿಗ್ಗೆ ಮಾಡ್ತಿದ್ದ ಕೆಲಸ ನನ್ನ ನಿದ್ರೆ ಹಾಳು ಮಾಡ್ತಿತ್ತು ಎಂದಿದ್ದಾಳೆ ಕಂಗನಾ.

ಹಿಪ್ ಹಾಪ್ ಸಾಂಗ್ ಹಾಕಿಕೊಂಡು ಶಾಹಿದ್ ವ್ಯಾಯಾಮ ಮಾಡ್ತಾ ಇದ್ದ. ಸಾಂಗ್ ದೊಡ್ಡದಾಗಿ ಕೇಳ್ತಾ ಇತ್ತು. ಕಿರಿಕಿರಿಯಾಗ್ತಾ ಇತ್ತು. ಕಾಟೇಜ್ ನಿಂದ ಓಡಿ ಹೋಗುವಂತಾಗಿತ್ತು ಎಂದು ಕಂಗನಾ ಹೇಳಿದ್ದಾಳೆ. ಹಾಗೆ ಶಾಹಿದ್ ಜೊತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕರಣ್ ಜೋಹರ್ ‘ಕಾಫಿ ವಿತ್ ಕರಣ್’ ನಲ್ಲಿ ಇಬ್ಬರೂ ಕಾಣಿಸಿಕೊಳ್ಳಲಿದ್ದೇವೆಂದು ಕಂಗನಾ ಹೇಳಿದ್ದಾಳೆ. ‘ರಂಗೂನ್’ ಫೆಬ್ರವರಿ 24ರಂದು ತೆರೆಗೆ ಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...