alex Certify
ಕನ್ನಡ ದುನಿಯಾ       Mobile App
       

Kannada Duniya

ಖಾಸಗಿ ಜೀವನಕ್ಕೆ ಧಕ್ಕೆ ತರಬೇಡಿ ಅಂತಿದ್ದಾರೆ ಕಂಗನಾ

kangana-dance

ಬಾಲಿವುಡ್ ನಟ ಹೃತಿಕ್ ರೋಷನ್ ಅವರೊಂದಿಗೆ ಸಂಘರ್ಷಕ್ಕಿಳಿದಿರುವ ಖ್ಯಾತ ನಟಿ ಕಂಗನಾ ರನಾವತ್, ಈ ಜಗಳವನ್ನು ತಾವಾಗೇ ಹಾದಿರಂಪ ಬೀದಿರಂಪ ಮಾಡಿಕೊಂಡಿದ್ದು, ಇದೀಗ ತಮ್ಮ ಖಾಸಗಿ ಜೀವನಕ್ಕೆ ಧಕ್ಕೆ ತರಬೇಡಿ ಎಂದು ಮಾಧ್ಯಮಗಳನ್ನು ಕೋರಿದ್ದಾರೆ.

ಹೃತಿಕ್ ರೋಷನ್ ಜೊತೆಗೆ ಸಂಬಂಧ ಹೊಂದಿದ್ದ ಕಂಗನಾ ರನಾವತ್ ಬಳಿಕ ಅಷ್ಟೇ ವೇಗವಾಗಿ ದೂರವಾಗಿದ್ದರು. ಪತ್ನಿ ಸೂಸಾನೆಯಿಂದ ವಿಚ್ಚೇದನ ಪಡೆದಿದ್ದ ಹೃತಿಕ್, ಕಂಗನಾರ ಮುಂದೆ ವಿವಾಹ ಪ್ರಸ್ತಾಪವನ್ನೂ ಇಟ್ಟಿದ್ದರೆಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಅದೇನಾಯ್ತೋ ಕೆಲ ದಿನಗಳಲ್ಲೇ ಹಾವು- ಮುಂಗುಸಿಯಂತೆ ಇಬ್ಬರೂ ಕದನಕ್ಕೆ ನಿಂತರು.

ಸಮಯ ಸಿಕ್ಕಾಗಲೆಲ್ಲಾ ಪರಸ್ಪರರ ವಿರುದ್ದ ಕೆಸರೆರೆಚಿಕೊಳ್ಳುತ್ತಿದ್ದ ಇವರಿಬ್ಬರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಲೀಗಲ್ ನೋಟಿಸ್ ಕೊಟ್ಟುಕೊಂಡರು. ಯಾವಾಗ ಮಾಧ್ಯಮಗಳಲ್ಲಿ ಈ ವಿಚಾರಗಳು ದೊಡ್ಡದಾಗಿ ಬಿಂಬಿತವಾದವೋ ಇಬ್ಬರೂ ಸದ್ಯಕ್ಕೆ ತಣ್ಣಗಾಗಿದ್ದಾರೆ. ಜೊತೆಗೆ ಈ ಕುರಿತು ಮೌನ ಮುರಿದಿರುವ ಕಂಗನಾ, ಸದ್ಯ ನನ್ನ ಖಾಸಗಿ ಜೀವನಕ್ಕೆ ಧಕ್ಕೆ ತರಬೇಡಿ. ಸಮಯ ಬಂದಾಗ ನಾನೇ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...