alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದರಿ ಅನುಭವಿಸಿದ ನೋವನ್ನು ಬಿಚ್ಚಿಟ್ಟ ಕಂಗನಾ

_1486875439

ಬಾಲಿವುಡ್ ಬೆಡಗಿ ಕಂಗನಾ ರಾಣಾವತ್ ‘ರಂಗೂನ್’ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಿದ್ದಾಳೆ. ಸೈಫ್ ಅಲಿ ಖಾನ್ ಹಾಗೂ ಶಾಹಿದ್ ಕಪೂರ್ ಜೊತೆ ಬೋಲ್ಡ್ ದೃಶ್ಯಗಳಲ್ಲಿ ಕಂಗನಾ ಮಿಂಚಿದ್ದಾಳೆ. ಇತ್ತೀಚೆಗೆ ನ್ಯೂಸ್ ವೆಬ್ಸೈಟ್ ಒಂದರ ಜೊತೆ ಮಾತನಾಡ್ತಿದ್ದ ಕಂಗನಾ ತನ್ನ ಖಾಸಗಿ ಜೀವನದ ಬಗ್ಗೆ ಹೇಳಿಕೊಂಡಿದ್ದಾಳೆ.

ಮಹಿಳೆಯರಿಗೆ ಕಿರಿಕಿರಿ ನೀಡುವ ಪುರುಷರ ಬಗ್ಗೆ ಮಾತನಾಡಿದ ಕಂಗನಾ ಯಾರಾದ್ರೂ ತೊಂದರೆ ನೀಡುತ್ತಿದ್ದರೆ ಸುಮ್ಮನಿರಬಾರದು. ಸುಮ್ಮನಿರುವುದರಿಂದ ಪರಿಸ್ಥಿತಿ ಸುಧಾರಿಸುವುದಿಲ್ಲ. ಮತ್ತಷ್ಟು ಹದಗೆಡುತ್ತದೆ. ಹುಡುಗಿಯರಿಗೆ ಸುಮ್ಮನಿರುವುದನ್ನು ಹೇಳಿಕೊಡ್ತಾರೆ. ಆ ನಂತ್ರ ಹುಡುಗಿಯರೇ ಕಷ್ಟಪಡಬೇಕಾಗುತ್ತದೆ ಎಂದು ಕಂಗನಾ ಹೇಳಿದ್ದಾಳೆ.

ಸುಮ್ಮನಿದ್ದ ಕಾರಣ ನಮ್ಮ ಕುಟುಂಬದವರು ನೋವುಣ್ಣುವಂತಾಗಿದೆ. ಸಹೋದರಿ ಎಲ್ಲವನ್ನೂ ಹೇಳಿದ್ದರೆ ಆ್ಯಸಿಡ್ ದಾಳಿಯಾಗ್ತಿರಲಿಲ್ಲ. ಸಹೋದರಿ ರಂಗೋಲಿಯನ್ನು ಆತ ಪೀಡಿಸ್ತಾ ಇದ್ದ. ಆಕೆ ಮನೆಯವರಿಗೆ ಹೇಳದೆ ಸುಮ್ಮನಿದ್ದಳು. ಹಾಗಾಗಿ ಆತ ಆ್ಯಸಿಡ್ ದಾಳಿ ಮಾಡಿದ ಎಂದಿದ್ದಾಳೆ ಕಂಗನಾ.

ಬಾಲಿವುಡ್ ನಲ್ಲಿ ಅನೇಕರು ಸುಳ್ಳು ಹೇಳ್ತಾರೆ. ಸುಳ್ಳು ಹೇಳುವಂತೆ ಪಕ್ಕದವರಿಗೂ ಒತ್ತಾಯ ಮಾಡ್ತಾರೆ. ಆದ್ರೆ ನನಗೆ ಸುಳ್ಳು ಹೇಳೋದು ಇಷ್ಟವಿಲ್ಲ. ಬೇರೆಯವರು ಸುಳ್ಳು ಹೇಳಿದ್ರೆ ನಾನು ಸಹಿಸಿಕೊಳ್ಳುವುದಿಲ್ಲ. ಹಾಗಾಗಿಯೇ ಅವರಿಗೆ ನಾನು ಇಷ್ಟವಿಲ್ಲ. ಅದೇ ಕಾರಣಕ್ಕೆ ನನಗೂ ಅವರು ಇಷ್ಟವಿಲ್ಲ ಎಂದಿದ್ದಾಳೆ ಬೆಡಗಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...