alex Certify
ಕನ್ನಡ ದುನಿಯಾ       Mobile App
       

Kannada Duniya

‘ರಂಗೂನ್’ : ಪ್ರೀತಿ, ಯುದ್ಧ ಮತ್ತು ಸಂಚು….

rangoon

‘ಓಂಕಾರಾ’, ‘ಹೈದರ್’ ನಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿದ ವಿಶಾಲ್ ಭಾರದ್ವಾಜ್ ಅವರ ಮೇಲೆ ಪ್ರೇಕ್ಷಕರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

‘ರಂಗೂನ್’ ಟ್ರೇಲರ್ ನೋಡಿದ್ರೆ ಆ ನಿರೀಕ್ಷೆಗಳು ಹುಸಿಯಾಗುವ ಸಾಧ್ಯತೆ ಕಡಿಮೆ. ಸೈಫ್ ಅಲಿ ಖಾನ್, ಶಾಹಿದ್ ಕಪೂರ್ ಹಾಗೂ ಕಂಗನಾ ರನಾವತ್ ಅಭಿನಯದ ‘ರಂಗೂನ್’ ಚಿತ್ರದಲ್ಲಿ ಥ್ರಿಲ್ಲರ್, ಆಕ್ಷನ್, ರೊಮ್ಯಾನ್ಸ್ ಎಲ್ಲವೂ ಇದೆ.

ಎರಡನೇ ವಿಶ್ವ ಯುದ್ಧದ ಹಿನ್ನೆಲೆಯಲ್ಲಿ ಮೂಡಿ ಬಂದಿರುವ ಸಿನಿಮಾ ಇದು. ‘ರಂಗೂನ್’ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರದ ರಿಲೀಸ್ ಗಾಗಿ ಪ್ರೇಕ್ಷಕರು ಕಾಯುವಂತಾಗಿದೆ. ಯಾಕಂದ್ರೆ ‘ರಂಗೂನ್’ ಟ್ರೇಲರ್ ಸಿನಿಪ್ರಿಯರನ್ನು ರಂಜಿಸ್ತಾ ಇದೆ.

ಇದೊಂದು ತ್ರಿಕೋನ ಪ್ರೇಮಕಥೆಯಾದ್ರೂ ಇದರಲ್ಲೂ ಯುದ್ಧವಿದೆ, ಪ್ರೀತಿಗಾಗಿ ನಡೆಯುವ ಸಮರ. ಯುದ್ಧದಲ್ಲಿ ಹೋರಾಡ್ತಾ ಇರೋ ಸೈನಿಕರನ್ನು ರಂಜಿಸಲೆಂದೇ ಸೈಫ್, ಕಂಗನಾಳನ್ನು ಬರ್ಮಾಗೆ ಕಳಿಸ್ತಾನೆ. ಅವಳ ರಕ್ಷಕನಾಗಿ ಜೊತೆಗೆ ಸಾಗುವ ಶಾಹಿದ್, ಕಂಗನಾ ಜೊತೆ ಲವ್ವಲ್ಲಿ ಬೀಳ್ತಾನೆ. ಪ್ರೀತಿ, ಯುದ್ಧ ಮತ್ತು ಸಂಚು ರಂಗೂನ್ ಚಿತ್ರದ ಕಥಾಹಂದರ. ಫೆಬ್ರವರಿ 24 ರಂದು ‘ರಂಗೂನ್’ ತೆರೆಗೆ ಬರ್ತಾ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...