alex Certify
ಕನ್ನಡ ದುನಿಯಾ       Mobile App
       

Kannada Duniya

ಆ.15 ರಂದು ತೆರೆಗೆ ಬರಲಿದೆ ಮಣಿಕರ್ಣಿಕಾ ಟೀಸರ್

ಬಾಲಿವುಡ್ ನಟಿ ಕಂಗನಾ ಬಹುದಿನದ ಕನಸು ಈಡೇರುತ್ತಿದೆ. ಐತಿಹಾಸಿಕ ಚಿತ್ರಕ್ಕಾಗಿ ಕಂಗನಾ ಬಣ್ಣ ಹಚ್ಚಿದ್ದಾರೆ. ಮಣಿಕರ್ಣಿಕಾ-ದಿ ಕ್ವೀನ್ ಆಫ್ ಝಾನ್ಸಿ ಚಿತ್ರದ ಚಿತ್ರೀಕರಣ ಮುಗಿದಿದೆ. ಚಿತ್ರ ಯಾವಾಗ ಬಿಡುಗಡೆಯಾಗುತ್ತೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಆದ್ರೆ ಚಿತ್ರದ ಟೀಸರ್ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ.

ಮಂಗಳವಾರ ಕಂಗನಾ, ನಿರ್ಮಾಪಕ ಕಮಲ್ ಜೈನ್ ಕಚೇರಿಗೆ ಬಂದಿದ್ದಳು. ಚಿತ್ರದ ಟೀಸರ್ ವೀಕ್ಷಣೆ ಮಾಡಿದ ಕಂಗನಾ ತುಂಬಾ ಖುಷಿಯಾಗಿದ್ದಾಳೆ. ಟೀಸರ್ ನೋಡಿ ಹೊರ ಬಂದ ಕಂಗನಾ ನಿರ್ಮಾಪಕರ ಜೊತೆ ಸೇರಿ ಟೀಸರ್ ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ರು.

ಚಿತ್ರವನ್ನು ಆಗಸ್ಟ್ 15 ರಂದು ಬಿಡುಗಡೆ ಮಾಡುವ ಪ್ಲಾನ್ ಮಾಡಿತ್ತು ಚಿತ್ರತಂಡ. ನಿಗದಿಯಂತೆ ಚಿತ್ರದ ಶೂಟಿಂಗ್ ಮುಗಿಯಲಿಲ್ಲ. ಹಾಗಾಗಿ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ಮೂಲಗಳು ಹೇಳಿವೆ. ಈ ಬಗ್ಗೆ ಈಗ್ಲೇ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕಮಲ್ ಹೇಳಿದ್ದಾರೆ. ಚಿತ್ರ ಜನವರಿ 26 ರಂದು ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ಹೇಳಿವೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...