alex Certify
ಕನ್ನಡ ದುನಿಯಾ       Mobile App
       

Kannada Duniya

ಟೈಟ್ ಡ್ರೆಸ್ ತೊಟ್ಟ ಬೆಡಗಿಗೆ ಉಸಿರಾಡೋದೆ ಕಷ್ಟವಾಗಿತ್ತು…!

ಸದಾ ಸುದ್ದಿಯಲ್ಲಿರುವ ಬೆಡಗಿಯರಲ್ಲಿ ಕಂಗನಾ ಕೂಡ ಒಬ್ಳು.ಕಂಗನಾ ಎಲ್ಲೆ ಹೋದ್ರೂ, ಏನು ಮಾಡಿದ್ರೂ ಸುದ್ದಿಯಾಗ್ತಾಳೆ. ಇತ್ತೀಚೆಗೆ ಮಿಸ್ಟರ್ ಇಂಡಿಯಾ ಕಾರ್ಯಕ್ರಮಕ್ಕೆ ಬಂದಿದ್ದ ಕಂಗನಾ ಡ್ರೆಸ್ ನಿಂದ ಚರ್ಚೆಗೆ ಬಂದಿದ್ದಾಳೆ.

ಬೋಲ್ಡ್ ಹಾಗೂ ತುಂಬಾ ಟೈಟ್ ಡ್ರೆಸ್ ಧರಿಸಿದ್ದ ಕಂಗನಾ ಈ ಡ್ರೆಸ್ ನಿಂದ ಕಿರಿಕಿರಿ ಅನುಭವಿಸಿದ್ದಳು. ಕಂಗನಾ ಮುಖ ನೋಡಿದ್ರೆ ಇದು ಸ್ಪಷ್ಟವಾಗ್ತಿತ್ತು. ಸ್ಪರ್ಧೆ ವಿಜೇತರ ಜೊತೆ ಫೋಟೋಕ್ಕೆ ಫೋಸ್ ಕೊಟ್ಟ ಕಂಗನಾ ಉಸಿರು ಬಿಗಿಹಿಡಿದಂತೆ ಕಾಣ್ತಿದ್ದಳು. ನಗೋದು ಆಕೆಗೆ ಕಷ್ಟವಾದಂತಿತ್ತು.

ಬಿಳಿ ಬಣ್ಣದ ಟೈಟ್ ಟಾಪ್ ಹಾಗೂ ಕಪ್ಪು ಬಣ್ಣದ ಸ್ಕರ್ಟ್ ಧರಿಸಿದ್ದ ಕಂಗನಾ ಮೇಕಪ್ ಕೂಡ ಹೇಳಿಕೊಳ್ಳುವಷ್ಟು ಚೆನ್ನಾಗಿರಲಿಲ್ಲ. ಸದ್ಯ ಮಣಿಕರ್ಣಿಕಾ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಿರುವ ಕಂಗನಾ ರಾಣಿ ಲಕ್ಷ್ಮಿಬಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...