alex Certify
ಕನ್ನಡ ದುನಿಯಾ       Mobile App
       

Kannada Duniya

ಕಂಗನಾ ಧರಿಸಿದ್ದ Gucci ನೆಕ್ಲೆಸ್ ಬೆಲೆಯೆಷ್ಟು ಗೊತ್ತಾ?

ಬಾಲಿವುಡ್ ಬೆಡಗಿ ಕಂಗನಾ ಬುಧವಾರ ರಾತ್ರಿ ಇನ್ ಕನ್ವರ್ಸೇಷನ್ ವಿತ್ ಮಿಸ್ಟಿಕ್ 2018 ಕಾರ್ಯಕ್ರಮದಲ್ಲಿ ಸದ್ಗುರು ಜಗ್ಗಿ ವಾಸುದೇವ್ ಜೊತೆ ಮಾತುಕತೆ ನಡೆಸಿದ್ದಾಳೆ. ಕಂಗನಾ ಈ ವೇಳೆ ಅನೇಕ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾಳೆ. ಇದೇ ವೇಳೆ ನಾನು ರಾಜಕೀಯಕ್ಕೆ ಬರುವ ಯಾವುದೇ ಉದ್ದೇಶವಿಲ್ಲವೆಂದು ಸ್ಪಷ್ಟಪಡಿಸಿದ್ದಾಳೆ.

ಈ ಕಾರ್ಯಕ್ರಮಕ್ಕೆ ಕಂಗನಾ ಗುಲಾಬಿ ಬಣ್ಣದ ಸೀರೆಯುಟ್ಟು ಬಂದಿದ್ದಳು. ಮುತ್ತಿನಿಂದ ಮಾಡಿದ್ದ ಸುಂದರ ನೆಕ್ಲೇಸ್ ಕಂಗನಾ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು. ಕಂಗನಾ ಧರಿಸಿದ್ದ ಈ ನೆಕ್ಲೆಸ್ ಬೆಲೆ ಕೇಳಿದ್ರೆ ಸಾಮಾನ್ಯರು ಕಂಗಾಲಾಗೋದು ನಿಶ್ಚಿತ.

ಕಂಗನಾ ಧರಿಸಿದ್ದ Gucci ನೆಕ್ಲೆಸ್ ಬೆಲೆ 1,990 ಡಾಲರ್. ಅಂದ್ರೆ ಸುಮಾರು 1,36,563 ರೂಪಾಯಿ. ಇಟಾಲಿಯನ್ ಬ್ರ್ಯಾಂಡ್ ನ Gucci ಈ ಹಾರಕ್ಕೆ ಹಾಕಿದ್ದ ಮುತ್ತುಗಳು ಹಾರದ ಸೌಂದರ್ಯವನ್ನು ಹೆಚ್ಚಿಸಿವೆ. ಕಂಗನಾ ಈ ನೆಕ್ಲೆಸನ್ನು ಈ ಹಿಂದೆ ಕೂಡ ಧರಿಸಿದ್ದಳು.

ಕಂಗನಾ ಫ್ಯಾಷನ್ ಹಾಗೂ ಕ್ಲಾಸಿಕ್ ಲುಕ್ ಗೆ ಹೆಸರು ಪಡೆದಿದ್ದಾಳೆ. ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದ ಕಂಗನಾ, ಜಗ್ಗಿ ವಾಸುದೇವ್ ಜೊತೆ ಅನೇಕ ವಿಷ್ಯಗಳನ್ನು ಚರ್ಚೆ ಮಾಡಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...