alex Certify
ಕನ್ನಡ ದುನಿಯಾ       Mobile App
       

Kannada Duniya

‘ಸಿಮ್ರನ್’ ಅವತಾರದಲ್ಲಿ ಕ್ಯೂಟ್ ಕಂಗನಾ….

kangana-ranaut_640x480_71494814638

ನಟಿ ಕಂಗನಾ ರನಾವತ್ ಈಗ ‘ಸಿಮ್ರನ್’ ಅವತಾರದಲ್ಲಿ ಮಿಂಚ್ತಿದ್ದಾಳೆ. ನಿನ್ನೆಯಷ್ಟೆ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಕಂಗನಾಳ ಕ್ಯೂಟ್ ಆ್ಯಕ್ಟಿಂಗ್ ಅಭಿಮಾನಿಗಳಿಗೆ ಇಷ್ಟವಾಗಿದೆ. ‘ಸಿಮ್ರನ್’ ಚಿತ್ರವನ್ನು, ಹನ್ಸಲ್ ಮೆಹ್ತಾ ನಿರ್ದೇಶನ ಮಾಡಿದ್ದಾರೆ. ಕಂಗನಾಳ ಫನ್ನಿ ನಟನೆಯೇ ಈ ಚಿತ್ರದ ಜೀವಾಳ.

ಕ್ವೀನ್ ಚಿತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದ ಕಂಗನಾ, ‘ಸಿಮ್ರನ್’ ನಲ್ಲೂ ಸಖತ್ ಡಿಫರೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ಪ್ರಧಾನವಾದ ಚಿತ್ರ ಇದಾಗಿದ್ದು, ಇಡೀ ಸಿನೆಮಾಕ್ಕೆ ಕಂಗನಾ ಜೀವ ತುಂಬಿದ್ದಾರೆ.

ಟೀಸರ್ ನಲ್ಲಿ ‘ಸಿಮ್ರನ್’ ಝಲಕ್ ನೋಡಿದ ಅಭಿಮಾನಿಗಳು ಚಿತ್ರ ಬಿಡುಗಡೆಗಾಗಿ ಕಾಯುವಂತಾಗಿದೆ. ಸೆಪ್ಟೆಂಬರ್ 15ರಂದು ಚಿತ್ರ ಬಿಡುಗಡೆಯಾಗಲಿದೆ. ಸಿಮ್ರನ್ ಳ ಫನ್ನಿ ಅವತಾರ ಅಭಿಮಾನಿಗಳನ್ನು ರಂಜಿಸೋದ್ರಲ್ಲಿ ಅನುಮಾನವೇ ಇಲ್ಲ.

ಸಿಮ್ರನ್ ಹೋಟೆಲ್ ಒಂದರಲ್ಲಿ ಕೆಲಸ ಮಾಡುವ ಯುವತಿ. ಸ್ನೇಹಿತರ ಜೊತೆ ತಮಾಷೆಯಾಗಿ ಬದುಕ್ತಾಳೆ. ಚಿತ್ರದ ಬಹುಭಾಗವನ್ನು ಅಮೆರಿಕದಲ್ಲಿ ಶೂಟಿಂಗ್ ಮಾಡಲಾಗಿದೆ. ಕಳೆದ ವರ್ಷವೇ ಚಿತ್ರೀಕರಣ ಆರಂಭವಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...