alex Certify
ಕನ್ನಡ ದುನಿಯಾ       Mobile App
       

Kannada Duniya

‘ತೇಜು’ ಚಿತ್ರದ ಮೂಲಕ ನಿರ್ದೇಶಕಿಯಾಗ್ತಿದ್ದಾಳೆ ಬಾಲಿವುಡ್ ಬೆಡಗಿ

kan

ಕಂಗನಾ ರನಾವತ್ ಬಾಲಿವುಡ್ ನ ಅತ್ಯಂತ ಪ್ರತಿಭಾವಂತ ನಟಿ. ಈಗ ಕೇವಲ ನಟನೆ ಮಾತ್ರವಲ್ಲ ನಿರ್ದೇಶನದ ಕಡೆಗೂ ಮುಖ ಮಾಡಿದ್ದಾಳೆ. ಹಿಮಾಚಲದ ಈ ಬ್ಯೂಟಿ ಕ್ವೀನ್ ‘ತೇಜು’ ಎಂಬ ಚಿತ್ರಕ್ಕೆ ಆ್ಯಕ್ಷನ್, ಕಟ್ ಹೇಳಲಿದ್ದಾಳಂತೆ. ಇದು ಕಂಗನಾ ನಿರ್ದೇಶನದಲ್ಲಿ ಮೂಡಿ ಬರಲಿರುವ ಮೊದಲ ಸಿನೆಮಾ.

‘ತೇಜು’ ಚಿತ್ರದಲ್ಲಿ ಖುದ್ದು ಕಂಗನಾ ನಟಿಸ್ತಿದ್ದಾಳೆ. 80 ವರ್ಷದ ಮಹಿಳೆಯ ಪಾತ್ರ ಮಾಡಲಿದ್ದಾಳಂತೆ. ತೇಜು ಎಂಬಾಕೆಯ ವ್ಯಕ್ತಿತ್ವವೇ ಸಿನೆಮಾದ ಹೈಲೈಟ್. ಕಂಗನಾ ಚಿಕ್ಕ ಮಗುವಾಗಿದ್ದಾಗ ಆಕೆಯ ಅಜ್ಜಿ 80ರ ಆಸುಪಾಸಿನಲ್ಲಿದ್ದರಂತೆ. ಈಗ್ಲೂ ಹಿರಿಜೀವಗಳನ್ನು ನೋಡಿದಾಗೆಲ್ಲ ಕಂಗನಾಗೆ ಅಜ್ಜಿಯ ನೆನಪಾಗುತ್ತದೆ.

ಸಮಾಜದಲ್ಲಿ ವೃದ್ಧರನ್ನು ಕಡೆಗಣಿಸಲಾಗುತ್ತಿದೆ ಅಂತಾ ಕಂಗನಾ ಬೇಸರ ವ್ಯಕ್ತಪಡಿಸಿದ್ದಾರೆ. ಹಿಮಾಚಲದ ಬದುಕು, ಅಲ್ಲಿನ ಸಂಸ್ಕೃತಿ, ಸಂಪ್ರದಾಯಗಳನ್ನು ಕೂಡ ‘ತೇಜು’ ಸಿನೆಮಾ ಬಿಚ್ಚಿಡಲಿದೆ. ಅಷ್ಟೇ ಅಲ್ಲ ಕಂಗನಾಳ ನೈಜ ಬದುಕನ್ನು ಕೂಡ ‘ತೇಜು’ ಚಿತ್ರದ ಮೂಲಕ ವೀಕ್ಷಿಸಬಹುದು. ಡಿಸೆಂಬರ್ ನಲ್ಲಿ ಕಂಗನಾ ನಿರ್ದೇಶನದ ‘ತೇಜು’ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...