alex Certify
ಕನ್ನಡ ದುನಿಯಾ       Mobile App
       

Kannada Duniya

ಹೃತಿಕ್ ಗೆ ತಿರುಗೇಟು ಕೊಟ್ಟಿದ್ದಾಳೆ ಕಂಗನಾ ಸಹೋದರಿ

ಹೃತಿಕ್ ರೋಶನ್ ಹಾಗೂ ಕಂಗನಾ ರನಾವತ್ ನಡುವಣ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಲೇ ಇದೆ. ಕಂಗನಾ ತನ್ನನ್ನು ಹಿಂಬಾಲಿಸಿ ಕಾಟ ಕೊಟ್ಟಿದ್ದಾಳೆ ಅನ್ನೋದು ಹೃತಿಕ್ ಆರೋಪ. ಅಷ್ಟೇ ಅಲ್ಲ ಅಶ್ಲೀಲ ಇಮೇಲ್ ಕಳಿಸಿದ್ದಾಳೆ ಅಂತಾ 29 ಪುಟಗಳ ದೂರಿನಲ್ಲಿ ಹೃತಿಕ್ ಉಲ್ಲೇಖಿಸಿದ್ದರು.

2016ರ ಏಪ್ರಿಲ್ ನಲ್ಲಿ ಹೃತಿಕ್, ಕಂಗನಾ ವಿರುದ್ಧ ದೂರು ನೀಡಿದ್ದರು. ಹೃತಿಕ್ ನೀಡಿರೋ ದೂರಿನ ಸಂಪೂರ್ಣ ವಿವರ ಈಗ ಲಭ್ಯವಾಗಿದೆ. 2009ರಲ್ಲಿ ಕೈಟ್ಸ್ ಚಿತ್ರೀಕರಣದ ವೇಳೆ ಕಂಗನಾ ಹಾಗೂ ಹೃತಿಕ್ ಪರಿಚಯವಾಗಿತ್ತಂತೆ. ಕ್ರಿಶ್ ಚಿತ್ರದಲ್ಲಿ ಇಬ್ಬರೂ ಜೊತೆಯಾಗಿ ನಟಿಸಿದ್ದಾರೆ.

2014ರ ವೇಳೆಗೆ ಕಂಗನಾರಿಂದ ನಿಂದನಾತ್ಮಕ ಇಮೇಲ್ ಗಳು ಬರಲಾರಂಭಿಸಿದ್ವು ಅನ್ನೋದು ಹೃತಿಕ್ ಆರೋಪ. ಅಷ್ಟೇ ಅಲ್ಲ ಕಂಗನಾ ಸಹೋದರಿ ರಂಗೋಲಿ ಕೂಡ ಹೃತಿಕ್ ಗೆ ಇಮೇಲ್ ಕಳಿಸಿದ್ದರಂತೆ. ಕಂಗನಾ ಮೇಲೆ ಮಾನಸಿಕ ಮತ್ತು ದೈಹಿಕ ಅತ್ಯಾಚಾರ ನಡೆಸಿರುವುದಾಗಿ ಆರೋಪಿಸಿದ್ದಳಂತೆ.

ಈ ಬಗ್ಗೆ ಖುದ್ದು ಭೇಟಿಯಾಗಿ ಚರ್ಚಿಸೋಣ ಎಂದಿದ್ದ ಹೃತಿಕ್, ನಂತರ ಸೈಬರ್ ಸೆಲ್ ಗೆ ದೂರು ನೀಡಿದ್ದರು ಅನ್ನೋದು ಅವರ ವಕೀಲರ ವಾದ. ಇದೀಗ ಕಂಗನಾ ಸಹೋದರಿ ರಂಗೋಲಿ ಹೃತಿಕ್ ಗೆ ಟ್ವಿಟ್ಟರ್ ನಲ್ಲಿ ತಿರುಗೇಟು ಕೊಟ್ಟಿದ್ದಾಳೆ. ಯಾರು ಯಾರನ್ನು ಹಿಂಬಾಲಿಸುತ್ತಿದ್ರು ಅನ್ನೋದು ಜಗತ್ತಿಗೇ ಗೊತ್ತಿದೆ, ವೃಥಾ ಆರೋಪ ಮಾಡುವುದನ್ನು ಬಿಟ್ಟು ಮಾಜಿ ಪತ್ನಿ ಮತ್ತು ಮಕ್ಕಳ ಕಡೆಗೆ ಗಮನ ಕೊಡು ಅಂತಾ ಹೃತಿಕ್ ಗೆ ಸೂಚಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...