alex Certify
ಕನ್ನಡ ದುನಿಯಾ       Mobile App
       

Kannada Duniya

ಕಂಗನಾ ಸಿನಿಮಾದ ಹಸಿಬಿಸಿ ದೃಶ್ಯಗಳಿಗೆ ಬಿದ್ದಿದೆ ಕತ್ತರಿ

ಕಂಗನಾ ರನಾವತ್ ಅಭಿನಯದ ‘ಸಿಮ್ರನ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಕತ್ತರಿ ಬಿದ್ದಿದೆ. ಚಿತ್ರದ 10 ದೃಶ್ಯಗಳನ್ನು ಸೆನ್ಸಾರ್ ಮಂಡಳಿ ಕತ್ತರಿಸಿ ಹಾಕಿದೆ. ಸಿ ಬಿ ಎಫ್ ಸಿ ಕ್ರಮವನ್ನು ಚಿತ್ರದ ನಿರ್ಮಾಪಕರು ಕೂಡ ಒಪ್ಪಿಕೊಂಡಿದ್ದಾರೆ.

ಸಿಮ್ರನ್ ಚಿತ್ರದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಸೀನ್ ಮತ್ತು ಡೈಲಾಗ್ ಗಳಿವೆ. ಆದ್ರೆ ಅದನ್ನೆಲ್ಲ ಒಪ್ಪಲು ಸಾಧ್ಯವಿಲ್ಲ ಎಂದಿರೋ ಸೆನ್ಸಾರ್ ಬೋರ್ಡ್, ಕತ್ತರಿ ಪ್ರಯೋಗ ಮಾಡಿದೆ. ಚಿತ್ರದಲ್ಲಿರುವ ಇಂಟಿಮೇಟ್ ಸೀನ್ ಗಳ ಸೌಂಡ್ ಮೇಲೂ ಮಂಡಳಿ ಕೆಂಗಣ್ಣು ಬೀರಿದೆ.

ದೃಶ್ಯಕ್ಕಿಂತಲೂ ಅದಕ್ಕೆ ಕೊಟ್ಟಿರುವ ಸೌಂಡ್ ವಿಪರೀತ ಪ್ರಚೋದನಕಾರಿಯಾಗಿದೆ ಅಂತಾ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ. ಆ ಸೌಂಡ್ ಎಫೆಕ್ಟ್ ಕಡಿಮೆ ಮಾಡುವಂತೆ ಸೂಚಿಸಲಾಗಿದೆ.

ಸೆನ್ಸಾರ್ ಮಂಡಳಿಯ ಅಧ್ಯಕ್ಷರಾಗಿದ್ದ ಪಹ್ಲಾಜ್ ನಿಹ್ಲಾನಿ ಅವರನ್ನು ಆಗಸ್ಟ್ ನಲ್ಲಿ ಹುದ್ದೆಯಿಂದ ಕೈಬಿಡಲಾಗಿತ್ತು. ಅದಾದ್ಮೇಲೆ ಪ್ರಸೂನ್ ಜೋಶಿ, ಮಂಡಳಿಯ ಅಧ್ಯಕ್ಷ ಪಟ್ಟ ಅಲಂಕರಿಸಿದ್ದಾರೆ. ಪ್ರಸೂನ್ ಜೋಶಿ ಕೂಡ ಪಹ್ಲಾಜ್ ನಿಹ್ಲಾನಿ ಅವರಂತೆ ಸಿಕ್ಕಾಪಟ್ಟೆ ಸ್ಟ್ರಿಕ್ಟ್ ಅನ್ನೋ ಮಾತುಗಳು ಕೇಳಿ ಬಂದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...