alex Certify
ಕನ್ನಡ ದುನಿಯಾ       Mobile App
       

Kannada Duniya

ಅಪಘಾತಕ್ಕೀಡಾದ ಮರುದಿನವೇ ಕಂಗನಾ ಮಾಡಿದ್ಲು ಈ ಕೆಲ್ಸ

kangana-ranaut

ಕಂಗನಾ ರನಾವತ್ ಬಾಲಿವುಡ್ ನ ಸ್ಟ್ರಾಂಗ್ ನಟಿ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ನೇರ ಮಾತು, ಬೋಲ್ಡ್ ಪಾತ್ರಗಳ ಮೂಲಕವೇ ಬಿಟೌನ್ ನಲ್ಲಿ ಹೆಸರು ಮಾಡಿರುವ ಕಂಗನಾ, ರೀಲ್ ನಲ್ಲಿ ಮಾತ್ರವಲ್ಲ ರಿಯಲ್ ಆಗಿಯೂ ಧೈರ್ಯವಂತೆ. ಇತ್ತೀಚೆಗೆ ಕಂಗನಾ ಮಾಡಿದ ಕೆಲಸ ನಿಜಕ್ಕೂ ಎಲ್ಲರಿಗೆ ಪ್ರೇರಣೆಯಾಗಬಲ್ಲದು.

ಇತ್ತೀಚೆಗಷ್ಟೆ ಕಂಗನಾ ಕಾರು ಅಪಘಾತಕ್ಕೀಡಾಗಿತ್ತು. 381ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಭರ್ತಿ ಟ್ರಾಫಿಕ್ ಮಧ್ಯೆ ಚಾಲಕ ಕಾರು ಓಡಿಸ್ತಾ ಇದ್ದ. ಇದ್ದಕ್ಕಿದ್ದಂತೆ ಅವನಿಗೆ ಕೆಮ್ಮು ಬರಲಾರಂಭಿಸಿತ್ತು, ಕಾರನ್ನು ನಿಯಂತ್ರಿಸಲು ಕೂಡ ಅವನಿಂದ ಸಾಧ್ಯವಾಗಲಿಲ್ಲ. ಕಂಟ್ರೋಲ್ ತಪ್ಪಿದ್ದ ಕಾರು ಕಬ್ಬಿಣದ ಬೇಲಿಗೆ ಡಿಕ್ಕಿ ಹೊಡೆದಿತ್ತು. ಅದೃಷ್ಟವಶಾತ್ ಕಂಗನಾಗೆ ಪ್ರಾಣಾಪಾಯವಾಗಿಲ್ಲ. ಆದ್ರೆ ಕಂಗನಾ ಹಣೆ ಮತ್ತು ಮೊಣಕೈಗೆ ಸಣ್ಣಪುಟ್ಟ ಗಾಯವಾಗಿತ್ತು.

ಈ ಅಪಘಾತ ಸಹಜವಾಗಿ ಯಾರನ್ನಾದ್ರೂ ವಿಚಲಿತರಾಗಿಸುತ್ತೆ. ಸುಧಾರಿಸಿಕೊಳ್ಳಲು ಎರಡು ದಿನಗಳಾದ್ರೂ ಬೇಕು. ಆದ್ರೆ ಕಂಗನಾ ಮಾತ್ರ ಮರುದಿನವೇ ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಕೊಂಡ್ರು. ಕಂಗನಾರ ಧೈರ್ಯ ಮತ್ತು ಕೆಲಸದ ಬಗ್ಗೆ ಇರುವ ಬದ್ಧತೆ ನಿಜಕ್ಕೂ ಪ್ರೇರಣೆಯಾಗುವಂಥದ್ದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...