alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕೀಯಕ್ಕೆ ಬರ್ತಾರಾ ನಟಿ ಕಂಗನಾ? ಇಲ್ಲಿದೆ ಅಸಲಿ ವಿಷಯ….

ಕಂಗನಾ ರನಾವತ್ ಸದ್ಯ ವಿವಾದಗಳಿಂದ್ಲೇ ಸುದ್ದಿ ಮಾಡಿರೋ ನಟಿ. ಕಂಗನಾಳ ನೇರ ನುಡಿಯೇ ಅವರನ್ನು ವಿವಾದದಲ್ಲಿ ಸಿಕ್ಕಿಹಾಕಿಕೊಳ್ಳುವಂತೆ ಮಾಡುತ್ತದೆ. ಇದೀಗ ಕಂಗನಾ ರಾಜಕೀಯ ಪ್ರವೇಶ ಮಾಡಲಿದ್ದಾರೆ ಅನ್ನೋ ಊಹಾಪೋಹಗಳು ಹುಟ್ಟಿಕೊಂಡಿವೆ.

ಮಾಧ್ಯಮಗಳಲ್ಲಿ ಕೂಡ ಕಂಗನಾ ರಾಜಕೀಯಕ್ಕೆ ಬರ್ತಾರೆ ಅನ್ನೋ ವರದಿಗಳು ಪ್ರಕಟವಾಗಿದ್ದವು. ಕಂಗನಾ ಬಿಜೆಪಿ ಸೇರಲು ಸಜ್ಜಾಗಿದ್ದಾರೆ, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಅಂತೆಲ್ಲಾ ಗಾಸಿಪ್ ಗಳು ಹರಿದಾಡಿದ್ವು.

ಆದ್ರೀಗ ಕಂಗನಾ ಪೊಲಿಟಿಕಲ್ ಎಂಟ್ರಿ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ಕಂಗನಾ ರಾಜಕೀಯ ಸೇರುತ್ತಿಲ್ಲ ಅಂತಾ ಅವರ ಆಪ್ತ ಮೂಲಗಳೇ ಸ್ಪಷ್ಟಪಡಿಸಿವೆ. ಸದ್ಯ ಮಣಿಕರ್ಣಿಕಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿರೋ ಕಂಗನಾಗೆ, ರಾಜಕೀಯದ ಬಗ್ಗೆ ಆಸಕ್ತಿಯೇ ಇಲ್ಲವಂತೆ. ಹಾಗಾಗಿ ರಾಜಕೀಯ ಪ್ರವೇಶದ ಸುದ್ದಿ ಸಂಪೂರ್ಣ ಸುಳ್ಳು ಅನ್ನೋದು ಸ್ಪಷ್ಟವಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...