alex Certify
ಕನ್ನಡ ದುನಿಯಾ       Mobile App
       

Kannada Duniya

ಶೂಟಿಂಗ್ ವೇಳೆ ಗಾಯಗೊಂಡ ನಟಿ ಕಂಗನಾ ಹಣೆಗೆ 15 ಹೊಲಿಗೆ

cut_1500532763_618x347

ಬಾಲಿವುಡ್ ನಟಿ ಕಂಗನಾ ಅಭಿಮಾನಿಗಳಿಗೊಂದು ಬ್ಯಾಡ್ ನ್ಯೂಸ್. ನಟಿ ಕಂಗನಾ ಮಣಿಕರ್ಣಿಕಾ-ದಿ ಕ್ವೀನ್ ಆಫ್ ಝಾನ್ಸಿ ಚಿತ್ರದ ಶೂಟಿಂಗ್ ವೇಳೆ ಗಾಯಗೊಂಡಿದ್ದಾಳೆ.

ಮೂಲಗಳ ಪ್ರಕಾರ, ಹೈದ್ರಾಬಾದ್ ನಲ್ಲಿ ಮಣಿಕರ್ಣಿಕಾ-ದಿ ಕ್ವೀನ್ ಆಫ್ ಝಾನ್ಸಿ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಚಿತ್ರದ ತಲ್ವಾರ್ ದೃಶ್ಯವನ್ನು ಶೂಟ್ ಮಾಡಲಾಗ್ತಾ ಇತ್ತು. ಈ ವೇಳೆ ತಲ್ವಾರ್ ಕೈ ತಪ್ಪಿದ್ದರಿಂದ ಕಂಗನಾ ಗಾಯಗೊಂಡಿದ್ದಾಳೆ. ಚಿತ್ರತಂಡದ ಸದಸ್ಯರ ಪ್ರಕಾರ ತಕ್ಷಣವೇ ಕಂಗನಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯ್ತಂತೆ. ಸದ್ಯ ಐಸಿಸಿಯುನಲ್ಲಿ ಚಿಕಿತ್ಸೆ ನಡೆಯುತ್ತಿದೆ. ಹಣೆಗೆ 15 ಹೊಲಿಗೆ ಹಾಕಲಾಗಿದೆಯಂತೆ. ಕೆಲ ದಿನ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಅನೇಕ ಬಾರಿ ರಿಹರ್ಸಲ್ ಮಾಡಲಾಗಿತ್ತಂತೆ. ಡ್ಯೂಪ್ ಬಳಸಲು ಕಂಗನಾ ನಿರಾಕರಿಸಿದ್ದರಂತೆ. ಘಟನೆ ನಡೆದ 30 ನಿಮಿಷದೊಳಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯ್ತು. ಈ ಘಟನೆ ನಡೆದಿರುವುದು ಬೇಸರದ ಸಂಗತಿ ಎಂದು ಚಿತ್ರದ ನಿರ್ಮಾಪಕ ಕಮಲ್ ಜೈನ್ ಹೇಳಿದ್ದಾರೆ.

ಕಂಗನಾ ಹಣೆ ಮೇಲೆ ಹಾಕಿರುವ ಹೊಲಿಗೆ ಕಲೆ ಹಾಗೆ ಇರಲಿದೆಯಂತೆ. ಹಾಗೆ ಶೂಟಿಂಗ್ ಮುಂದುವರೆಸುವುದಾಗಿ ಚಿತ್ರತಂಡ ಹೇಳಿದೆ. ಮುಂದಿನ ವಾರ ಕಂಗನಾ ಆಸ್ಪತ್ರೆಯಿಂದ ಬರಲಿದ್ದು, ಶೂಟಿಂಗ್ ಮುಗಿದ ನಂತ್ರ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...