alex Certify
ಕನ್ನಡ ದುನಿಯಾ       Mobile App
       

Kannada Duniya

ನಿರ್ಮಾಪಕರಿಗೆ ವಂಚಿಸಿದಳಾ ಕಂಗನಾ..?

kangana

ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಬಗ್ಗೆ ನಿರ್ಮಾಣವಾಗ್ತಾ ಇರೋ ‘ಮಣಿಕರ್ಣಿಕಾ’ ಚಿತ್ರ ಕಂಗನಾ ರನಾವತ್ ಗೆ ಸಂಕಷ್ಟ ತಂದಿದೆ. ಕಂಗನಾ ಸಹ ಲೇಖಕಿ ಎಂಬ ಕ್ರೆಡಿಟ್ ಪಡೆದುಕೊಂಡು ತನ್ನ ಕೆಲಸವನ್ನು ಹೈಜಾಕ್ ಮಾಡ್ತಿದ್ದಾರೆ ಅಂತಾ ಚಿತ್ರದ ಲೇಖಕರು ಆರೋಪ ಮಾಡಿದ್ದರು. ಇದೀಗ ಚಿತ್ರದ ನಿರ್ಮಾಪಕ ಕೇತನ್ ಮೆಹ್ತಾ ಪೊಲೀಸ್ ಠಾಣೆಯ ಕದ ತಟ್ಟಿದ್ದಾರೆ.

ಕಂಗನಾ ವಿರುದ್ಧ ವಂಚನೆ ಮತ್ತು ವಿಶ್ವಾಸ ದ್ರೋಹದ ಆರೋಪ ಮಾಡಿರೋ ಕೇತನ್ ಮೆಹ್ತಾ, ಆರ್ಥಿಕ ಅಪರಾಧ ದಳಕ್ಕೆ ದೂರು ನೀಡಿದ್ದಾರೆ. ಕಳೆದ ಒಂದು ತಿಂಗಳಿನಿಂದ ತಮ್ಮ ತಂಡ ಈ ಚಿತ್ರದ ಬಗ್ಗೆ ಕಂಗನಾ ಜೊತೆಗೆ ಚರ್ಚಿಸುತ್ತಿದೆ. ಸ್ಕ್ರಿಪ್ಟ್ ಹಾಗೂ ಸ್ಕೆಚ್ ಮಟೀರಿಯಲ್ ಗಳನ್ನೆಲ್ಲ ಕಂಗನಾ ಜೊತೆಗೆ ಶೇರ್ ಮಾಡಿದ್ದೆವು. ಆದ್ರೆ ಈಗ ಕಂಗನಾ ಬೇರೊಬ್ಬರ ಜೊತೆ ಸೇರಿ ಸಿನೆಮಾ ಮಾಡ್ತಿದ್ದಾರೆ ಅನ್ನೋದು ಕೇತನ್ ಆರೋಪ.

ಕಳೆದ 10 ವರ್ಷಗಳಿಂದ ಈ ಪ್ರಾಜೆಕ್ಟ್ ಗಾಗಿ ತಯಾರಿ ನಡೆಸಿದ್ದು, ಈಗ ಕಂಗನಾ ಅದನ್ನು ಹೈಜಾಕ್ ಮಾಡಿದ್ದಾರೆ. ಹಾಗಾಗಿ ಅವರಿಗೆ ನೋಟಿಸ್ ಕಳಿಸುತ್ತೇನೆ ಅಂತಾ ಎಚ್ಚರಿಸಿದ್ದಾರೆ. ಇದ್ರಿಂದ ತಮಗೆ 9 ಕೋಟಿ ರೂಪಾಯಿ ನಷ್ಟವಾಗಿದೆ, ಶೂಟಿಂಗ್ ಆರಂಭವಾದ್ಮೇಲೆ ಕಂಗನಾ ಪ್ರಾಜೆಕ್ಟ್ ಬಿಟ್ಟ ಹೋಗಿದ್ದಾರೆ ಅಂತಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆಯೂ ಆರಂಭವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...