alex Certify
ಕನ್ನಡ ದುನಿಯಾ       Mobile App
       

Kannada Duniya

ಕುತೂಹಲಕ್ಕೆ ಕಾರಣವಾಗಿದೆ ಕಂಗನಾ- ಹೃತಿಕ್ ರ ಹಳೆಯ ವಿಡಿಯೋ

kangana-ranaut_hritikಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ಬಾಲಿವುಡ್ ನಟ- ನಟಿಯರಾದ ಹೃತಿಕ್ ರೋಷನ್ ಹಾಗೂ ಕಂಗನಾ ರನಾವತ್ ರ ವಿಡಿಯೋ ಒಂದು ಕುತೂಹಲ ಹುಟ್ಟು ಹಾಕಿದೆ. ಇವರಿಬ್ಬರು ಕಾನೂನು ಸಮರಕ್ಕೆ ಮುಂದಾದ ವೇಳೆಯೇ 2010 ರಲ್ಲಿ ಯೂ ಟ್ಯೂಬ್ ನಲ್ಲಿ ಅಪ್ ಲೋಡ್ ಆಗಿದ್ದ ವಿಡಿಯೋ ಮತ್ತೆ ಚಲಾವಣೆಗೆ ಬಂದಿರುವುದು ಅಚ್ಚರಿಯನ್ನುಂಟು ಮಾಡಿದೆ.

‘ಕೈಟ್ಸ್’ ಚಿತ್ರದ ಚಿತ್ರೀಕರಣದ ವೇಳೆ ಆತ್ಮೀಯರಾಗಿದ್ದ ಹೃತಿಕ್ ಹಾಗೂ ಕಂಗನಾ ‘ಕ್ರಿಶ್ 3’ ಚಿತ್ರದ ಹೊತ್ತಿಗೆ ಹಾವು ಮುಂಗುಸಿಗಳಂತಾಗಿದ್ದರು. ಮಾಧ್ಯಮ ಪ್ರತಿನಿಧಿಗಳ ಬಳಿ ಕಂಗನಾ ಆಡಿದ ಮಾತೊಂದು ಈ ವಿರಸಕ್ಕೆ ತುಪ್ಪ ಸುರಿದಂತಾಗಿದ್ದು, ಬಳಿಕ ಪರಸ್ಪರರು ಸಾರ್ವಜನಿಕವಾಗಿಯೇ ಕೆಸರೆರೆಚಿಕೊಂಡರು.

ಈ ವಿಚಾರ ಈಗ ಮತ್ತಷ್ಟು ವಿಕೋಪಕ್ಕೆ ಹೋಗಿದ್ದು, ಇಬ್ಬರೂ ಪರಸ್ಪರರಿಗೆ ಲೀಗಲ್ ನೋಟೀಸ್ ಕೊಟ್ಟುಕೊಂಡಿದ್ದಾರೆ. ಈ ಮಧ್ಯೆ  ‘ಕೈಟ್ಸ್’ ಚಿತ್ರದ ಒಂದು ಹಾಡಿಗಾಗಿ ರಿಹರ್ಸಲ್ ಮಾಡುತ್ತಿದ್ದ ಹೃತಿಕ್ ಹಾಗೂ ಕಂಗನಾರ ಹಳೆಯ ವಿಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. 2010 ರಲ್ಲಿ ಅಪ್ ಲೋಡ್ ಆಗಿದ್ದ ಈ ವಿಡಿಯೋವನ್ನು ಹರಿಬಿಡುವ ಮೂಲಕ ಸದ್ಯಕ್ಕೆ ತಣ್ಣಗಾಗಿರುವ ಇಬ್ಬರ ಜಗಳಕ್ಕೆ ಮತ್ತೇ ತುಪ್ಪ ಸುರಿಯುವ ಕಾರ್ಯವನ್ನು ಕೆಲವರು ಮಾಡುತ್ತಿದ್ದಾರಾ ಎಂಬ ಗುಮಾನಿಗೆ ಇದು ಕಾರಣವಾಗಿದೆ. ಈ ವಿಡಿಯೋದಲ್ಲಿ ಇಬ್ಬರೂ ಒಟ್ಟಿಗೆ ಡ್ಯಾನ್ಸ್ ಕೂಡಾ ಮಾಡಿಲ್ಲ ಎಂಬುದು ಗಮನಾರ್ಹ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...