alex Certify
ಕನ್ನಡ ದುನಿಯಾ       Mobile App
       

Kannada Duniya

ಕಂಗನಾ 30 ನೇ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್

kanganaranaut7591

ಬಾಲಿವುಡ್ ನ ಬಿಂದಾಸ್ ಬೆಡಗಿ ಕಂಗನಾ ರನಾವತ್ ತಮ್ಮ 30ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ‘ರಾಣಿ ಲಕ್ಷ್ಮೀಬಾಯಿ’ ಬದುಕು ಆಧಾರಿತ ‘ಮಣಿಕರ್ಣಿಕಾ’ ಚಿತ್ರದಲ್ಲಿ ಕಂಗನಾ ನಟಿಸಲಿದ್ದು, ಶೂಟಿಂಗ್ ಆರಂಭಕ್ಕೂ ಮುನ್ನ ಕುಟುಂಬದವರ ಜೊತೆ ವೈಷ್ಣೋದೇವಿ ದರ್ಶನ ಮಾಡಿ ಬಂದಿದ್ದಾರೆ.

ಹೊಸ ಚಿತ್ರಕ್ಕೆ ವೈಷ್ಣೋದೇವಿ ಆಶೀರ್ವಾದ ಪಡೆಯುವುದರ ಜೊತೆಗೆ ಈ ಭೇಟಿಗೆ ಇನ್ನೊಂದು ಕಾರಣ ಕೂಡ ಇದೆ. ಕಂಗನಾ ತಮ್ಮದೇ ಆದ ಕಚೇರಿ ಹೊಂದಲು ಹೊಸ ಬಂಗಲೆಯೊಂದನ್ನು ಖರೀದಿ ಮಾಡಿದ್ದಾರೆ. ಕಂಗನಾ ನಿವಾಸದ ಸನಿಹದಲ್ಲೇ ಈ ಬಂಗಲೆಯಿದೆ. ಮೂರು ಮಹಡಿಯ ಈ ಕಟ್ಟಡ ಅತ್ಯಂತ ವಿಶಾಲವಾಗಿದ್ದು, ಅದರ ವಿನ್ಯಾಸಕ್ಕಾಗಿ ಕಂಗನಾ ಶಬನಮ್ ಗುಪ್ತಾರ ನೆರವು ಪಡೆದಿದ್ದಾರೆ.

ಮನಾಲಿಯಲ್ಲಿ ಬೆಟ್ಟದ ಮೇಲಿರುವ ತಮ್ಮ ಸುಂದರ ಮನೆಯಂತೆ ಈ ಬಂಗಲೆಯನ್ನು ಕೂಡ ಕಂಗನಾ ಅಲಂಕರಿಸುತ್ತಿದ್ದಾರೆ. ತಮ್ಮದೇ ಸ್ವಂತ ಕಚೇರಿ ಹೊಂದಬೇಕೆಂದು ಕಂಗನಾಗೆ ಮೊದಲಿನಿಂದ್ಲೂ ಆಸೆಯಿತ್ತು. ನಿರ್ದೇಶಕಿಯಾಗುವ ಇರಾದೆ ಹೊಂದಿರುವ ಕಂಗನಾ ಇದೇ ಕಚೇರಿಯಲ್ಲಿ ಹೊಸ ಕೆಲಸ ಆರಂಭಿಸಲಿದ್ದಾರಂತೆ.

‘ಮಣಿಕರ್ಣಿಕಾ’ ಚಿತ್ರದ ಶೂಟಿಂಗ್ ಮುಗಿದ ಬಳಿಕ ತಮ್ಮದೇ ನಿರ್ದೇಶನದ ಹೊಸ ಪ್ರಾಜೆಕ್ಟ್ ತಯಾರಿಯನ್ನು ಕಂಗನಾ ಶುರು ಮಾಡಲಿದ್ದಾರೆ. ಹುಟ್ಟುಹಬ್ಬಕ್ಕಾಗಿ ಬಂಗಲೆಯನ್ನು ಉಡುಗೊರೆಯಾಗಿ ಖರೀದಿಸಿರೋ ಕಂಗನಾ ವೈಷ್ಣೋದೇವಿ ಆಶೀರ್ವಾದ ಪಡೆದು ಹೊಸ ಕಾರ್ಯಕ್ಕೆ ನಾಂದಿ ಹಾಡ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...