alex Certify
ಕನ್ನಡ ದುನಿಯಾ       Mobile App
       

Kannada Duniya

ನನ್ನ ಮದುವೆ ಯಾವಾಗ ಎಂದು ಕೇಳಿದ ಕಂಗನಾ..!

kangana 123

ಇತ್ತೀಚೆಗಷ್ಟೇ ಹೃತಿಕ್‌ ರೋಷನ್‌ ಜೊತೆಗಿನ ಹಳೆಯ ಪ್ರೇಮ ಪ್ರಕರಣದ ಸಂಬಂಧ ಕೋರ್ಟ್‌ ಮೆಟ್ಟಿಲೇರಿರುವ ಬಾಲಿವುಡ್ ಬೆಡಗಿ ಕಂಗನಾ ರನಾವತ್‌ ಇದೀಗ ತಮ್ಮ ಮದುವೆಯ ವಿಷಯವನ್ನು ಜ್ಯೋತಿಷಿ ಬಳಿ ಪ್ರಸ್ತಾಪ ಮಾಡಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಹೌದು. ‘ತನು ವೆಡ್ಸ್‌ ಮನು ರಿಟರ್ನ್ಸ್’ ಚಿತ್ರದಲ್ಲಿನ ಅಭಿನಯಕ್ಕಾಗಿ ಸೋಮವಾರವಷ್ಟೇ ‘ಅತ್ಯುತ್ತಮ ನಟಿ’ ಪುರಸ್ಕಾರಕ್ಕೆ ಭಾಜನಳಾದ ಕಂಗನಾ ರನಾವತ್‌, ಭಾನುವಾರ ಹಿಮಾಚಲ ಪ್ರದೇಶದ ಜೋಗಿಂದರ್‌ ನಗರ್‌ ಎಂಬಲ್ಲಿ ಜ್ಯೋತಿಷಿಯೊಬ್ಬರನ್ನು ಭೇಟಿಯಾಗಿದ್ದಳು ಎನ್ನಲಾಗಿದೆ. ಅಲ್ಲದೇ ಈ ಸಮಯದಲ್ಲಿ ತಮ್ಮ ಆರೋಗ್ಯ ಸುಧಾರಣೆಯಾಗುವುದು ಯಾವಾಗ ಹಾಗೂ ಮದುವೆಯಾಗುವುದು ಯಾವಾಗ ಎಂಬ ಪ್ರಶ್ನೆಯನ್ನು ಕಂಗನಾ, ಜ್ಯೋತಿಷಿಗಳಲ್ಲಿ ಕೇಳಿದ್ದಾಳೆ ಎನ್ನಲಾಗಿದ್ದು, ಕುತೂಹಲ ಮೂಡಿಸಿದೆ.

ಒಟ್ಟಾರೆ ಹಳೆಯ ಪ್ರೇಮ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಏರಿರುವ ಸಮಯದಲ್ಲಿಯೇ ಕಂಗನಾ, ಜ್ಯೋತಿಷಿಗಳ ಮೊರೆ ಹೋಗಿರುವ ರಹಸ್ಯ ಸದ್ಯದಲ್ಲಿಯೇ ಬಯಲಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...