alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ಕಂಗನಾ ಬಿಚ್ಚಿಟ್ಟಿದ್ದಾಳೆ ಸ್ಪೋಟಕ ಸತ್ಯ

ಕಂಗನಾ ರನಾವತ್ ತಮ್ಮ ಅದ್ಭುತ ನಟನೆಯಿಂದ ಮಾತ್ರವಲ್ಲ ವಿವಾದಗಳಿಂದ್ಲೂ ಸುದ್ದಿಯಲ್ಲಿದ್ದಾರೆ. ಕಂಗನಾ ಹಾಗೂ ಹೃತಿಕ್ ರೋಶನ್ ನಡುವಣ ಅಫೇರ್, ಬ್ರೇಕಪ್ ಭಾರೀ ಚರ್ಚೆಯಾಗಿತ್ತು. ಇಬ್ಬರ ನಡುವಣ ಕಿತ್ತಾಟ ಕೋರ್ಟ್ ಮೆಟ್ಟಿಲೇರಿದ್ದು ಹಳೆಯ ಸುದ್ದಿ.

ಕಳೆದ 2 ವರ್ಷಗಳಿಂದ್ಲೂ ಈ ವಿವಾದ ಆಗಾಗ ಸದ್ದು ಮಾಡ್ತಾನೇ ಇದೆ. ಹೃತಿಕ್ ಜೊತೆಗಿನ ಕಿತ್ತಾಟದ ಸಮಯದಲ್ಲಿ ತಮಗೆ ಜೀವ ಬೆದರಿಕೆ ಇತ್ತು ಅಂತಾ ಕಂಗನಾ ಆರೋಪ ಮಾಡಿದ್ದಾರೆ. ಅಕ್ರಮ ಸಂಬಂಧದಲ್ಲಿ ರಿಸ್ಕ್ ತುಂಬಾನೇ ಇದೆ ಅನ್ನೋದನ್ನು ಕಂಗನಾ ಒಪ್ಪಿಕೊಂಡಿದ್ದಾರೆ.

ಯುವತಿಯರು ಗರ್ಭಿಣಿಯಾಗ್ತಾರೆ, ಅವರ ಹತ್ಯೆ ನಡೆಯುತ್ತೆ. ನನಗೂ ಕೂಡ ಆ ಸಮಯದಲ್ಲಿ ಜೀವ ಬೆದರಿಕೆ ಇತ್ತು ಅಂತಾ ಹೇಳಿಕೊಂಡಿದ್ದಾರೆ. ಮಲಯಾಳಂ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣವನ್ನು ಕೂಡ ಕಂಗನಾ ಉಲ್ಲೇಖಿಸಿದ್ದಾರೆ.

ನಟ ದಿಲೀಪ್, ಕಾವ್ಯಾ ಮಾಧವನ್ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಅನ್ನೋ ವಿಚಾರವನ್ನು ನಟಿ ಅವರ ಪತ್ನಿ ಮಂಜು ವಾರಿಯರ್ ಬಳಿ ಹೇಳಿದ್ದಳಂತೆ. ಇದೇ ಕಾರಣಕ್ಕೆ ದಿಲೀಪ್, ನಟಿಯ ಅಪಹರಣಕ್ಕೆ ಸಂಚು ರೂಪಿಸಿದ್ದರು ಅನ್ನೋ ಆರೋಪವಿದೆ.

ಹೃತಿಕ್ ಹಾಗೂ ರಾಕೇಶ್ ರೋಶನ್ ರನ್ನು ಮುಖತಃ ಭೇಟಿಯಾಗಲು ಕಾಯುತ್ತಿದ್ದೇನೆ. ಆದ್ರೆ ಹೃತಿಕ್ ನನ್ನ ಕಣ್ತಪ್ಪಿಸಿ, ಕದ್ದು ಮುಚ್ಚಿ ಓಡಾಡ್ತಿದ್ದಾರೆ. ಅವರಿಬ್ಬರೂ ನನ್ನ ಬಳಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ನಡೆದಿದ್ದೇನು ಅನ್ನೋದನ್ನು ನಾನೇ ಜಗತ್ತಿಗೆ ಸಾರಿ ಹೇಳ್ತೇನೆ ಎಂದಿದ್ದಾರೆ ಕಂಗನಾ. ಈ ಹೇಳಿಕೆಯಿಂದ ವಿವಾದಕ್ಕೆ ಮತ್ತೆ ಜೀವ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...