alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಭೇಟಿಯಾದ ಬಾಲಿವುಡ್ ‘ಕ್ವೀನ್’

ಬಾಲಿವುಡ್ ಕ್ವೀನ್ ಕಂಗನಾ ದೇಶದ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿ. ಕಂಗನಾಗೆ ಪಿಎಂ ಮೋದಿ ಭೇಟಿ ಮಾಡುವ ಅವಕಾಶ ಸಿಕ್ಕಿದೆ. ಕಂಗಾನ ಜೊತೆ ಸೆನ್ಸಾರ್ ಬೋರ್ಡ್ ನ ಅಧ್ಯಕ್ಷ ಪ್ರಸಾದ್ ಜೋಷಿ ಕೂಡ ಮೋದಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಕಂಗನಾ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ತನ್ನ ರೋಲ್ ಮಾಡೆಲ್ ಎಂದಿದ್ದರು. ನಾನು ಪತ್ರಿಕೆಯನ್ನು ತುಂಬಾ ಓದೋದಿಲ್ಲ. ಆದ್ರೆ ಮೋದಿಯ ದೊಡ್ಡ ಅಭಿಮಾನಿ. ಅವರದ್ದು ಯಶಸ್ವಿ ಕಥೆ. ಟೀ ಮಾರುವವರೊಬ್ಬರು ದೇಶದ ಪ್ರಧಾನಿಯಾಗಿದ್ದಾರೆ. ಇದು ಅವರದ್ದಲ್ಲ, ದೇಶದ ಪ್ರಜಾಪ್ರಭುತ್ವದ ಜಯ ಎಂದು ಕಂಗನಾ ಹೇಳಿದ್ದರು.

ಈಗ ಕಾರ್ಯಕ್ರಮವೊಂದರ ಹಿನ್ನೆಲೆಯಲ್ಲಿ ಕಂಗನಾ, ಪಿಎಂ ಮೋದಿ ಭೇಟಿಯಾಗಿದ್ದಾರೆ. ಈ ವೇಳೆ ಕಂಗನಾ ಸೀರೆಯುಟ್ಟಿದ್ದರು. ಮೋದಿ ಜೊತೆ ಕಂಗನಾ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...