alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಜ್ರಿ ಭೇಟಿ ನಂತ್ರ ಮೋದಿಯನ್ನು ಹೊಗಳಿದ ಕಮಲ್

ಗುರುವಾರ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಭೇಟಿ ಮಾಡಿನ ನಂತ್ರ ಸೂಪರ್ ಸ್ಟಾರ್ ಕಮಲ್ ಹಾಸನ್ ರಾಜಕೀಯಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇಂಡಿಯಾ ಟುಡೇ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಕಮಲ್ ಹಾಸನ್ ಜನರು ಬಯಸಿದ್ರೆ ರಾಜಕೀಯಕ್ಕೆ ಬರ್ತೇನೆ ಎಂದಿದ್ದಾರೆ.

ಕಮಲ್ ಹಾಸನ್ ಯಾವ ಪಕ್ಷದ ಜೊತೆ ಕೈ ಜೋಡಿಸಲಿದ್ದಾರೆ ಎಂಬ ವಿಷ್ಯ ಇನ್ನೂ ಬಹಿರಂಗವಾಗಿಲ್ಲ. ಆದ್ರೆ ಸಂದರ್ಶನದಲ್ಲಿ ಮುಖ್ಯಮಂತ್ರಿಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನಲ್ಲಿ ಕಮಲ್ ಹಾಸನ್ ಸೇರಿದಂತೆ ಎಲ್ಲರೂ ಸಿಎಂ ಆಗಲು ಬಯಸ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಕಮಲ್ ಹಾಸನ್ ಅವಕಾಶ ಸಿಕ್ಕಲ್ಲಿ ಮುಖ್ಯಮಂತ್ರಿಯಾಗ್ತೇನೆ ಎಂದಿದ್ದಾರೆ.

ಕೇಜ್ರಿವಾಲ್ ಭೇಟಿ ನಂತ್ರ ಮಾತನಾಡಿದ್ದ ಕಮಲ್, ಕೇಜ್ರಿವಾಲ್ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದಾರೆ ಎಂದಿದ್ದರು. ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನೂ ಕಮಲ್ ಹೊಗಳಿದ್ದಾರೆ. ಮೋದಿ ಪ್ರಯತ್ನ ಮಾಡಿದ್ದಾರೆ. ಉಳಿದವರಂತೆ ಮಾತನಾಡಿ ಮುಗಿಸಿಲ್ಲ ಎಂದಿದ್ದಾರೆ.

ರಜನಿಕಾಂತ್ ಜೊತೆ ರಾಜಕೀಯ ಪ್ರವೇಶ ಮಾಡುವ ಪ್ರಶ್ನೆಗೆ ಉತ್ತರ ನೀಡಿದ ಕಮಲ್ ಹಾಸನ್, ನಾವಿಬ್ಬರು ವಿಭಿನ್ನ ವಿಚಾರವನ್ನು ಹೊಂದಿದ್ದೇವೆ. ಒಬ್ಬರ ಸಿದ್ಧಾಂತವನ್ನು ಇನ್ನೊಬ್ಬರ ಮೇಲೆ ಹೇರುವುದಿಲ್ಲ. ಆದ್ರೆ ಉಳಿದ ರಾಜಕಾರಣಿಗಳಿಗೆ ನಾವು ಮಾದರಿಯಾಗುವುದ್ರಲ್ಲಿ ಸಂಶಯವಿಲ್ಲ ಎಂದು ಕಮಲ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...